Ad imageAd image

ನಿಪ್ಪಾಣಿ ಕುರುಂದವಾಡ ನಗರ ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂತೋಷ ತಾರಳೆ ಏಕಮತದಿಂದ ಆಯ್ಕೆ

Bharath Vaibhav
ನಿಪ್ಪಾಣಿ ಕುರುಂದವಾಡ ನಗರ ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂತೋಷ ತಾರಳೆ ಏಕಮತದಿಂದ ಆಯ್ಕೆ
WhatsApp Group Join Now
Telegram Group Join Now

ನಿಪ್ಪಾಣಿ : ಕುರುಂದವಾಡ ನಗರ ಶ್ರಮಿಕ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿಣಿಯ ಆಯ್ಕೆ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು ಈ ಆಯಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸಂತೋಷ ತಾರಳೆ, ಉಪಾಧ್ಯಕ್ಷರಾಗಿ ನಾಗೇಶ್ ಗಾಯಕವಾಡ, ಕಾರ್ಯದರ್ಶಿಯಾಗಿ ಉಮೇಶ್ ಮಾಳಗೆ ಹಾಗೂ ಕಾರ್ಯಾಧ್ಯಕ್ಷರಾಗಿ ಸಂದೀಪ ಅಡಸೊಳೆ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.

ಈ ಆಯ್ಕೆ ಪ್ರಕ್ರಿಯೆಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷ ಸ್ಥಾನವನ್ನು ಹಿರಿಯ ಹಾಗೂ ಅನುಭವಿ ಪತ್ರಕರ್ತರಾದ ಬಾಬಾಸಾಹೇಬ್ ಮೋರೆ ಅವರು ವಹಿಸಿದ್ದರು. ಸಭೆಯ ಆರಂಭದಲ್ಲಿ ಸಂಘದ ಇದುವರೆಗೆ ನಡೆದ ಕಾರ್ಯಗಳ ಅವಲೋಕನ ನಡೆಸಲಾಯಿತು. ನಂತರ ಎಲ್ಲರ ಒಮ್ಮತದಿಂದ ನೂತನ ಪದಾಧಿಕಾರಿಗಳ ಹೆಸರುಗಳನ್ನು ಸೂಚಿಸಲಾಯಿತು. ಯಾವುದೇ ವಾದ–ವಿವಾದ ಅಥವಾ ಭಿನ್ನಾಭಿಪ್ರಾಯಗಳಿಲ್ಲದೆ ಶಾಂತತೆಯ ವಾತಾವರಣದಲ್ಲಿ ಈ ಆಯ್ಕೆ ನಡೆದಿದ್ದು, ಇದರಿಂದ ಪತ್ರಕರ್ತ ವಲಯದಲ್ಲಿ ಸಂತೋಷ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ನಗರದಲ್ಲಿನ ಹಿರಿಯ, ಅನುಭವಿ ಹಾಗೂ ಯುವ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಸುರೇಶ್ ಕಾಂಬಳೆ, ಬಾಬಾಸಾಹೇಬ್ ಮೋರೆ, ಆನಂದ ಶಿಂಗೆ, ಗಣಪತಿ ಕೋಳಿ, ಅನಿಲ್ ಕೆರಿಪಾಳೆ, ರಾಜಗೊಂಡ ಪಾಟೀಲ್, ತುಕಾರಾಮ ಪವಾರ, ರವೀಂದ್ರ ಕೆಸರಕರ, ಉತ್ತಮ ಭೋಯಿ, ದಿಗಂಬರ್ ಕಡಮ್, ರಮೇಶ್ ಸುತಾರ್, ಕುಲದೀಪ ಕುಂಭಾರ್, ಜಮೀರ್ ಪಠಾಣ್ ಸೇರಿದಂತೆ ಅನೇಕ ಪತ್ರಕರ್ತರು ಪ್ರಮುಖವಾಗಿ ಹಾಜರಿದ್ದರು. ಎಲ್ಲ ಪತ್ರಕರ್ತರು ನೂತನ ಕಾರ್ಯಕಾರಿಣಿಗೆ ಅಭಿನಂದನೆ ಸಲ್ಲಿಸಿ ಮುಂದಿನ ಕಾರ್ಯಕಾಲಕ್ಕೆ ಶುಭಾಶಯ ಕೋರಿದರು.
ಆಯ್ಕೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ಸಂತೋಷ ತಾರಳೆ ಅವರು, ಪತ್ರಕರ್ತರ ವಿವಿಧ ಸಮಸ್ಯೆಗಳು, ಮಾನಧನ, ಸುರಕ್ಷತೆ, ಸಾಮಾಜಿಕ ಗೌರವ ಹಾಗೂ ವೃತ್ತಿಪರ ಅಡಚಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಘದ ಮೂಲಕ ಒಟ್ಟಾಗಿ ಪ್ರಯತ್ನಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಘವನ್ನು ಇನ್ನಷ್ಟು ಬಲಿಷ್ಠ, ಸಂಘಟಿತ ಹಾಗೂ ಪರಿಣಾಮಕಾರಿಯಾಗಿ ರೂಪಿಸಲು ಎಲ್ಲ ಪತ್ರಕರ್ತರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಈ ವೇಳೆ ಉಪಾಧ್ಯಕ್ಷ ನಾಗೇಶ್ ಗಾಯಕ್ವಾಡ, ಕಾರ್ಯದರ್ಶಿ ಉಮೇಶ್ ಮಾಳಗೆ ಹಾಗೂ ಕಾರ್ಯಾಧ್ಯಕ್ಷ ಸಂದೀಪ ಅಡ್ಸೂಳ ಅವರು ಸಹ ತಮ್ಮ ಮನೋಗತ ವ್ಯಕ್ತಪಡಿಸಿ, ಸಂಘದ ಕಾರ್ಯಕ್ಕೆ ನಿರಂತರತೆ ನೀಡುವ ದೃಢನಿಶ್ಚಯ ವ್ಯಕ್ತಪಡಿಸಿದರು. ಪತ್ರಕರ್ತರ ನಡುವೆ ಏಕತೆ ಬೆಳೆಸಿ ಸಂಘದ ಮೂಲಕ ಸಕಾರಾತ್ಮಕ ಹಾಗೂ ರಚನಾತ್ಮಕ ಉಪಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಬಾಬಾಸಾಹೇಬ್ ಮೋರೆ ಅವರು, ಪತ್ರಕರ್ತರು ಏಕತೆಯಿಂದ ಸಂಘಟನೆಯ ಮೂಲಕ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು, ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಕಾಪಾಡಬೇಕು ಹಾಗೂ ಸಮಾಜಹಿತದ ಪ್ರಶ್ನೆಗಳ ಮೇಲೆ ನಿರ್ಭೀತಿಯಾಗಿ ಲೇಖನಿ ನಡೆಸಬೇಕು ಎಂದು ಮಾರ್ಗದರ್ಶನ ನೀಡಿದರು.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!