ಧಾರವಾಡ: ಹುಬ್ಬಳ್ಳಿ ತಾಲೂಕ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡನೀಯ. ಈ ಪ್ರಕರಣನದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದ್ದು ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷರು ಯುವ ಘಟಕ ಸಿ. ಎಂ ದೊಡಮನಿ ಒತ್ತಾಯಿಸಿದ್ದಾರೆ
ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡಿರುವ ಅವರು, ಮಾನ್ಯ ಎಂಬ ಯುವತಿ ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂಬ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿರುವ ಅಮಾನವೀಯ ಮತ್ತು ಮರ್ಯಾದೆ ಗೇಡು ಹತ್ಯೆ ಘಟನೆ ಖಂಡನೀಯ.ಸರ್ಕಾರ ಆರೋಪಿಗಳಿಗೆ ಯಾವುದೇ ರೀತಿಯ ಜಮೀನು ಸಿಗದಂತೆ ಮುತ್ತುವರ್ಜಿವಹಿಸಬೇಕು ಮತ್ತು ಘಟನೆಗೆ ಕಾರಣವಾದವರನ್ನು ಗಲ್ಲು ಶಿಕ್ಷೆಗೆ ಒಳಪಡಿಸುವ ಕಾನೂನನ್ನು ರೂಪಿಸಬೇಕು.ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು. ನೊಂದ ದಲಿತ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ಪರಿಹಾರ, 5 ಎಕರೆ ಭೂಮಿ, ಸರ್ಕಾರಿ ಉದ್ಯೋಗ, ಯುವಕರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷರು ಯುವ ಘಟಕ ಸಿ. ಎಂ ದೊಡಮನಿ ಒತ್ತಾಯಿಸಿದ್ದಾರೆ.
ವರದಿ : ನಿತೀಶಗೌಡ ತಡಸ




