Ad imageAd image

ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ

Bharath Vaibhav
ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ
WhatsApp Group Join Now
Telegram Group Join Now

ಸಹಕಾರಿ ಸಂಸ್ಥೆಗಳ ಏಳ್ಗೆಗೆ ಸರ್ಕಾರ ಬದ್ಧವಾಗಿದೆ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಸಹಕಾರಿ ಸಂಸ್ಥೆಗಳ ಏಳ್ಗೆಗೆ ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ನಗರದ ಕೆ.ಎಲ್.ಇ. ಜಿರಗೆ ಭವನದಲ್ಲಿ ಭಾನುವಾರ 28 ರಂದು ಎಸ್ .ಎಸ್ . ಪಾಟೀಲ್ ವೇದಿಕೆಯ ಮೇಲೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಆಯೋಜಿಸಲಾದ ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಜನರಲ್ಲಿ ಅತಿ ವಿಶ್ವಾಸವನ್ನು ಹೆಚ್ಚಿಸಿವೆ ಎಂದರು.

ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಳರ್ ಅವರು  ಮಾತನಾಡಿ, ಸಹಕಾರಿ ರಂಗದಲ್ಲಿ  ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟು ಸಮಾನ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕತೆಯನ್ನು ಸುಧಾರಿಸಲು ಸಹಕಾರಿ ಕ್ಷೇತ್ರವು ಸಹಾಯಕವಾಗಿದೆ ಎಂದರು.

ಕೆ.ಎಲ್.ಇ. ಸಂಸ್ಥೆಕಾರ್ಯಾಧ್ಯಕ್ಷರಾದ  ಪ್ರಭಾಕರ ಕೋರೆ ಅವರು ಮಾತನಾಡಿ, 120 ವರ್ಷಗಳ ಹಿಂದೆ ಸಹಕಾರ ರಂಗ ಆರಂಭವಾಯಿತು.  ಈಗಲೂ ಸಹಕಾರ ಚಳವಳಿ ಜೀವಂತವಿರಲು ಅನೇಕರ ಶ್ರಮವಿದೆ. ಆದರೆ, ಸಹಕಾರಿ ಸಂಸ್ಥೆಗಳ ಸರ್ಕಾರದ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವುದು ಬೇಡ ಎಂದು ಹೇಳಿದರು.
ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಡವರನ್ನು ಆರ್ಥಿಕವಾಗಿ ಬೆಳೆಸುವ ಕಾರ್ಯವಾಗಬೇಕಿದೆ. ಅವರ ಅಭಿವೃದ್ಧಿಗಾಗಿ ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿ ನಾವೆಲ್ಲರೂ  ಶ್ರಮಿಸೋಣ ಎಂದರು.

ಧ್ವಜಾರೋಹಣವನ್ನು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಳರ್ ಅವರು ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ನಂಜನಗೌಡ ವಹಿಸಿದರು‌. ಮಾಜಿ ವಿಧಾನ ಪರಿಷತ್ ಸದಸ್ಯರು ಮಹಾಂತೇಶ ಕವಟಗಿಮಠ , ಮುಖ್ಯ ಅತಿಥಿಗಳಾಗಿ ಸಂಸದರಾದ ಜಗದೀಶ ಶೆಟ್ಟರ್ ಆಗಮಿಸಿದ್ದರು. ಶಾಸಕ ಆಸಿಫ್ (ರಾಜು) ಸೇಠ, ಮಾಜಿ ಸಹಕಾರಿ ಸಚಿವರಾದ ಎಸ್.ಎಸ್ ಪಾಟೀಲ, ನಿರ್ದೇಶಕರಾದ ಜಗದೀಶ ಕವಟಗಿಮಠ, ಪ್ರಾಂತಿಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ, ಪ್ರಥಮ ಅಧ್ಯಕ್ಷರಾದ‌ ಮನೋಹರ ಮಸ್ಕಿ, ಎಸ್ ಆರ್. ಸತೀಶ್ಚಂದ್ರ , ಹೆಚ್ ವಿ. ರಾಜೀವ್ , ಯು. ಹೆಚ್ ರಾಮಪ್ಪ , ಸಿ ಎನ್. ಪರಶಿವಮೂರ್ತಿ , ಅನೂಪ ದೇಶಪಾಂಡೆ, ವಿಶ್ವನಾಥ ಚ. ಹಿರೇಮಠ, ಗುರುನಾಥ ಜ್ಯಾಂತಿಕರ, ಬಿ. ಹೆಚ್ . ಕೃಷ್ಣಾರೆಡ್ಡಿ, ಸಚಿನ್ ಪಾಟೀಲ್. ಎ. ಆರ್. ಪ್ರಸನ್ನಕುಮಾರ , ಶರಣಗೌಡ ಜಿ. ಪಾಟೀಲ್ , ಡಿಆರ್‌ ಸಿಎಸ್‌ ರವೀಂದ್ರ ಪಾಟೀಲ್‌ ಹಾಗೂ ಗಣ್ಯರು ಇತರರು ಇದ್ದರು .

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!