ವಿಜಯಪುರ : ವಿಜಯಪುರದಲ್ಲಿ ಹೋಟೆಲ್ ಒಂದು ಧಗಧಗನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಹೋಟೆಲ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ ಕೆಲವೇ ನಿಮಿಷದಲ್ಲಿ ವಸ್ತುಗಳು ಸುಟ್ಟು ಭಸ್ಮವಾಗಿವೆ.
ವಿಜಯಪುರ ನಗರದ BLDE ರಸ್ತೆಯಲ್ಲಿರುವ ಕೃಷ್ಣ ಹೋಟೆಲ್ನಲ್ಲಿ ಈ ಒಂದು ಘಟನೆ ಸಂಭವಿಸಿದೆ.ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ.
ಘಟನೆಯಲ್ಲಿ ಹೋಟೆಲಲ್ಲಿ ಇದ್ದಂತಹ ಸಿಲಿಂಡರ್ ಗಳು ಬೆಂಕಿ ಇಂದ ಸ್ಪೋಟಗೊಂಡಿದ್ದು ಇಬ್ಬರು. ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.




