ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು (Pm Modi) ಈ ವರ್ಷದ ತಮ್ಮ ಕಡೆಯ ಮಾನ್ ಕೀ ಬಾತ್ ಕಾರ್ಯಕ್ರಮದಲ್ಲಿ ದುಬೈನಲ್ಲಿ ನೆಲೆಸಿರುವ ಭಾರತೀಯ ಅನಿವಾಸಿಗಳು, ಸುಂದರವಾದ ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಲು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಶಾಲೆಗಳನ್ನು ಮುಚ್ಚುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.
ದುಬೈನಲ್ಲಿರುವ ಕನ್ನಡ ಕುಟುಂಬಗಳು ತಮ್ಮ ಮಕ್ಕಳು ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದಾರೆ, ಆದರೆ ಭಾಷೆಯಿಂದ ದೂರವಾಗುತ್ತಿದ್ದಾರೆಯೇ ಎಂದು ಯೋಚಿಸಿದವು.
ಆ ಚಿಂತನೆಯಿಂದ ಹುಟ್ಟಿದ್ದೇ ಕನ್ನಡ ಪಾಠಶಾಲೆ. ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇಲ್ಲಿ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ. ಇದು ಕೇವಲ ತರಗತಿಯಲ್ಲ, ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದರು.
ಇದೀಗ ಕನ್ನಡ ಶಾಲೆಗಳ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಣ್ಣ ಶಾಲೆಗಳನ್ನು ಮುಚ್ಚುವ ಮಾತೇ ಇಲ್ಲ, ಕನ್ನಡ ಶಾಲೆಗಳನ್ನು ಉಳಿಸುವ ಬಗ್ಗೆ ಪ್ರತ್ಯೇಕ ಸಭೆಯನ್ನು ಮಾಡಲಾಗುತ್ತದೆ. ಆದಷ್ಟು ಬೇಗ ತಜ್ಞರ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ.. ಕೇಂದ್ರದಿಂದ ಹಿಂದಿ ಹೇರಿಕೆ ಪದೇಪದೇ ನಮ್ಮ ಮೇಲಾಗುತ್ತಿದೆ, ಆದರೆ ನಮ್ಮ ರಾಜ್ಯ ಸರ್ಕಾರ ಹಿಂದಿ ರಾಷ್ಟ್ರೀಯ ಬಾಷೆಯಲ್ಲ, ನಮಗೆ ಕನ್ನಡವೇ ಎಲ್ಲಾ ಎಂದು ತಿಳಿಸಿ ಹೇಳಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.




