ಯಾದಗಿರಿ: ಮುಂಬರುವ ಬಜೆಟ್ ಅನ್ನು ಸಿ.ಎಂ. ಸಿದ್ದರಾಮಯ್ಯನವರೇ ಮಂಡಿಸಲಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಈಗ ಸಿದ್ದರಾಮಯ್ಯನವೇ ಸಿ.ಎಂ. ಇದ್ದಾರೆ. ಅವರೇ ಬಜೆಟ್ ಮಂಡಿಸುವರು. ನಾಯಕತ್ವ ಬದಲಾವಣೆ ವಿಚಾರ ಹೈ ಕಮಾಂಡ್ಗೆ ಬಿಟ್ಟಿದ್ದು, ಸಂಕ್ರಾAತಿ ನಂತರ ನಾಯಕತ್ವ ಬದಲಾವಣೆ ಆಗುವುದೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸಂಕ್ರಾAತ್ರಿ ನಂತರ ನೋಡೋಣ ಎಂದಷ್ಟೇ ಹೇಳಿದರು.
ಇದೇ ವೇಳೆ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರಕಾರ ಬದ್ಧ ಎಂದರಲ್ಲದೇ ಮಹಾರಾಷ್ಟç ಪೊಲೀಸರು ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವರು ತನಿಖೆ ನಡೆಯುತ್ತಿದೆ. ಎರಡು ರಾಜ್ಯದ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿ ವರದಿ ನೀಡುವ ತನಕ ಕಾಯೋಣ ಎಂದರು.
‘ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುವರು’




