ಕಾಗವಾಡ:ಅನ್ನಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಹಾಗೂ ಶ್ರೀ ವಿಶ್ವಕರ್ಮ ಅಭಿವೃದ್ಧಿ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ವಕೀಲರಾದ ಉಮೇಶ ಜಾನು ಮನೋಜ ಇವರಿಗೆ ನೀಡಲಾಗಿದೆ.
ವಕೀಲ ಉಮೇಶ ಮನೋಜ ಇವರು ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದವರಾಗಿದ್ದು,ಇವರು ಕರ್ನಾಟಕದ ನೆಲ,ಜಲ,ಭಾಷೆ,ಸಾಹಿತ್ಯ ,ಸಾಂಸ್ಕೃತಿಕ,ಸಾಮಾಜಿಕ ಹಾಗೂ ಜನಪರ ಕಾಳಜಿ ಇಟ್ಟುಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ಬೆಂಗಳೂರಿನಲ್ಲಿ ಸನ್ಮಾನ ಹಾಗೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೆ ವೇಳೆ ಮಾತನಾಡಿದ ಅವರು,ನನ್ನ ಅನನ್ಯ ಸೇವೆ ಗುರ್ತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿ ಸತ್ಕರಿದ ಧನ್ಯವಾದಗಳು ಹಾಗೂ ಈ ಪ್ರಶಸ್ತಿಯಿಂದ ನನಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವಂತೆ ಪ್ರೇರೇಪಣೆ ನೀಡಿದೆ ಇದರಿಂದ ನನಗ ಹರ್ಷ ವ್ಯಕ್ತವಾಗಿದೆ ಎಂದು ಹೇಳಿದರು.
ವರದಿ.ಚಂದ್ರಕಾಂತ ಕಾಂಬಳೆ




