ಚಿಟಗುಪ್ಪ : ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಭಾರತೀಯ ಸೇನೆಯಲ್ಲಿ ಸುಮಾರು 37 ವರ್ಷಗಳ ಕಾಲ ದೇಶದ ವಿವಿಧ ಭಾಗದಲ್ಲಿ ಸೇವೆಸಲ್ಲಿಸಿ ಭಾರತ ಮಾತೆಯ ರಕ್ಷಣೆ ಮಾಡಿ,ನಿವೃತ್ತಿಹೊಂದಿ ಹೈದರಾಬಾದಗೆ ಆಗಮಿಸಿದ ನಿವೃತ್ತ ಯೋಧ ಬಸವರಾಜ್ ಮಾಣಿಕಪ್ಪ ರಾಜೋಳ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಹೈದರಾಬಾದ್ ನಗರದಲ್ಲಿ ನಿವೃತ್ತ ಯೋಧ ಬಸವರಾಜ್ ಹಾಗೂ ಅವರ ಪತ್ನಿ ಯಂಕಮ್ಮ ಅವರಿಗೆ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿ ಈರಪ್ಪ ಮೈಸಗೊಂಡ ಮಾಡಗೂಳ್ ಅವರು ಹಾಗೂ ಅವರ ಬಂಧುಗಳಿಂದ ಯೋಧರಿಗೆ ಸನ್ಮಾನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಭು,ಪೂಜಾ ಹಾಗೂ CRPF ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಸಜೀಶ್ ಲಂಬುನೋರ್




