Ad imageAd image

ಹೊಸ ವರ‍್ಷ ನಮಗೆಲ್ಲ ಒಳೀತು ಮಾಡಲಿ

Bharath Vaibhav
ಹೊಸ ವರ‍್ಷ ನಮಗೆಲ್ಲ ಒಳೀತು ಮಾಡಲಿ
WhatsApp Group Join Now
Telegram Group Join Now

———————————————ವರ‍್ಷಾಚರಣೆ ಇತಿಮಿತಿಯಲ್ಲಿರಲಿ
ರಾಜ್ಯಾದ್ಯಂತ ಜನರು ಹೊಸ ವರ‍್ಷಾಚರಣೆ ಗುಂಗಿನಲ್ಲಿದ್ದಾರೆ. ೨೦೨೫ ನೇ ಸಾಲಿನ ಕಡೆಯ ದಿನ ಇಂದು ಡಿಸೆಂಬರ್ ೩೧. ಪ್ರತಿಬಾರಿಯಂತೆ ಈ ಬಾರಿಯೂ ಕಾಲೆಂಡರ್ ತಿರುಗಿ ೨೦೨೬ ಕ್ಕೆ ಬಂದು ನಿಂತಿದೆ.
ಇAದು ರಾತ್ರಿ ೧೨ ಗಂಟೆ ಆಗುತ್ತಿದ್ದಂತೆಯೇ ೨೦೨೬ ಕ್ಕೆ ನಾವು ಕಾಲಿಡಲಿದ್ದು, ಜೀವನದ ಹೊಸ ಕನಸುಗಳೊಂದಿಗೆ ಮುನ್ನುಗ್ಗುತ್ತೇವೆ. ೨೦೨೫ ರಲ್ಲಿ ಜನರು ಸಾಕಷ್ಟು ಸುಖ: ದುಖ ಎರಡನ್ನೂ ಅನುಭವಿಸಿರುತ್ತಾರೆ. ಆದರೆ ಮುಂದಿನ ಹೊಸ ವರ‍್ಷ ೨೦೨೬ ರ ಜನ ಜೀವನದಲ್ಲಿ ಸುಖ; ಶಾಂತಿ ನೆಮ್ಮದಿ ತರಲೆಂಬ ಮಹಾದಾಸೆಯೊಂದಿಗೆ ನಾವು ಹೊಸ ವರ‍್ಷಕ್ಕೆ ಕಾಲಿಡುತ್ತಿದ್ದೇವೆ.
ಜನರ ಜೀವನ ಚೆನ್ನಾಗಿರಲಿ ಎಂಬ ಆಸೆ ಎಲ್ಲರಲ್ಲೂ ಇರುವುದು ಸಾಮಾನ್ಯ. ನಾವೆಲ್ಲರೂ ಜೀವನದಲ್ಲಿ ಸುಖ; ಶಾಂತಿ ಬರಲೆಂದೇ ಹಾರೈಸುತ್ತೇವೆ. ಯಾರಿಗೂ ದು:ಖ ಬೇಕಾಗಿಲ್ಲ. ಆದರೆ ಜೀವನ ಎಂದ ಮೇಲೆ ಸುಖ ಒಂದೇ ಬರಲಾರದು. ಸುಖ: ದು:ಖ  ಸಮ, ಸಮನಾಗಿ ಬರುವುದು ನಿಸರ‍್ಗ ನಿಯಮ. ಅದುವೇ ಜೀವನ.
ಹೊಸ ವರ‍್ಷದಲ್ಲಿ ನಾವೆಲ್ಲ ಸುಖವನ್ನೇ ಬಯಸುತ್ತೇವೆಯಾದರೂ ಜೀವನದ ಭಾಗವಾದ ದು:ಖವೂ ಸಮ್ಮೀಶ್ರವಾಗಿ ಬರುವುದು. ಬಂದ ಸುಖವನ್ನು ಎಂಜಾಯ್ ಮಾಡುತ್ತ, ಬಂದ ದು:ಖವನ್ನೂ ಎದುರಿಸುತ್ತ ಹೊಸ ವರ‍್ಷವನ್ನೂ ಮತ್ತಷ್ಟು ದೃಢವಾದ ಮನಸ್ಸಿನಿಂದ ಗಟ್ಟಿ ನರ‍್ಧಾರಗಳಿಂದ ಎದುರಿಸಲು ನಾವೆಲ್ಲ ಸಜ್ಜಾಗಬೇಕು.
ವರ‍್ಷಾಚರಣೆ ಕೇಡು ಮಾಡದಿರಲಿ: ಹೊಸ ವರ‍್ಷಾಚರಣೆ ಎಂಬುದು ಪ್ರತಿ ವರ‍್ಷ ಸಾಮಾನ್ಯ. ಅದನ್ನು ಇತಿ ಮಿತಿಯಲ್ಲಿ ಮಾಡಿಕೊಂಡು ನಷ್ಟ, ನೋವುಗಳು ಆಗದಂತೆ ಹೊಸ ವರ‍್ಷಾಚರಣೆ ಮಾಡೋಣ. ಹೊಸ ವರ‍್ಷ ನಮಗೆಲ್ಲ ಒಳ್ಳೆಯದು ಮಾಡಲಿ ಎಂದು ಆ ದೇವರಲ್ಲಿ ಪ್ರರ‍್ಥಿಸೋಣ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!