ಕಾಳಗಿ : ಕೊರವಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು, ಇಂದು ಬೆಳಿಗ್ಗೆ 10:00 ಗಂಟೆಗೆ,ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ, ಕೊರವಿ ಗ್ರಾಮದ ವಿವಿಧ ಮೂಲಭೂತ ಹಾಗೂ ರೈತಪರ ಬೇಡಿಕೆಗಳಿಗೆ ಒತ್ತಾಯಿಸಿ ರಸ್ತೆ ರೋಕ್ ಚಳುವಳಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯದ ಐತಿಹಾಸಿಕ ಪವಿತ್ರ ಕ್ಷೇತ್ರವಾದ ಕೊರವಂಜೇಶ್ವರಿ ದೇವಿಯ ದರ್ಶನಕ್ಕೆ ಪ್ರತಿದಿನವೂ, ವಿಶೇಷವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ಭಕ್ತರ ಜನಸಾಗರವೇ ಹರಿದು ಬರುತ್ತಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದರೂ, ವೇಗದೂತ (ಎಕ್ಸ್ಪ್ರೆಸ್) ಬಸ್‌ಗಳು ಕೊರವಿ ಗ್ರಾಮದಲ್ಲಿ ನಿಲುಗಡೆ ಮಾಡದೇ ಹಾದು ಹೋಗುತ್ತಿರುವುದು ಭಕ್ತರಿಗೆ ಹಾಗೂ ಸ್ಥಳೀಯರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.
ಈ ಕುರಿತು ಮಾತನಾಡಿದ ಕೆಪಿಆರ್ಎಸ್ ಜಿಲ್ಲಾಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ, “ಪವಿತ್ರ ದೇವಿ ಕ್ಷೇತ್ರವಿರುವ ಕೊರವಿಗೆ ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಮಾಡದಿರುವುದು ಅನ್ಯಾಯ.
ಇದು ಭಕ್ತರ ಮೇಲಿನ ನಿರ್ಲಕ್ಷ್ಯ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು ಹೀಗಿವೆ:
1) ಕೊರವಿ ಗ್ರಾಮಕ್ಕೆ ಎಲ್ಲಾ ಎಕ್ಸ್ಪ್ರೆಸ್ ಬಸ್‌ಗಳ ನಿಲುಗಡೆ
2) ಕೊರವಿ ಗ್ರಾಮಕ್ಕೆ ಹೊಸ ಗ್ರಾಮ ಪಂಚಾಯತ್ ನಿರ್ಮಾಣ
3) ಕೊರವಿ ಮತ್ತು ಗಾಂಧಿನಗರದಲ್ಲಿ ನೀರಿನ ಸಮಸ್ಯೆ ತಕ್ಷಣ ಬಗೆಹರಿಕೆ
4) ರೈತರು ಬೆಳೆದ ತೊಗರಿಗೆ ಪ್ರತಿ ಕ್ವಿಂಟಲ್ ₹12,500 ಬೆಂಬಲ ಬೆಲೆ
5) ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿ ಕ್ವಿಂಟಲ್ ತೊಗರಿಗೆ ತಲಾ ₹1,000 ಪ್ರೋತ್ಸಾಹ ಧನ
6)ತೊಗರಿ ತುರ್ತು ಖರೀದಿ ಕೇಂದ್ರ ತೆರೆಯಬೇಕು
7)ಎಲ್ಲಾ ರೈತರಿಗೆ ಬೆಳೆ ವಿಮೆ ಮಂಜೂರು,
ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರ ಸಾಲ ಮನ್ನಾ,
8)ಸಾಲದ ಬಾದೆಯಿಂದ ನಡೆಯುತ್ತಿರುವ ಸರಣಿ ರೈತರ ಆತ್ಮಹತ್ಯೆಗಳಿಗೆ ತಡೆ
ಈ ಎಲ್ಲಾ ಬೇಡಿಕೆಗಳನ್ನು ಒಳಗೊಂಡಂತೆ ಚಿಂಚೋಳಿ ತಶೀಲ್ದಾರ್ ಹಾಗೂ ಕಾಳಗಿ ತಾಲೂಕ ತಶೀಲ್ದಾರ್ ಪೃಥ್ವಿರಾಜ್ ಪಾಟೀಲ್, ಉಪ ತಹಶೀಲ್ದಾರ್ ರವಿಕುಮಾರ್ ಯಲಲಾಕರ, ತಾಲೂಕು ಪಂಚಾಯತ್ ಎ ಡಿ ಗಂಗಾಧರ್, ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ – ಕಾಳಗಿ ಮತ್ತು ಚಿಂಚೋಳಿ ಘಟಕ ವ್ಯವಸ್ಥಾಪಕರಿಗೆ ಕೊರವಿ ಗ್ರಾಮದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಇದು ಕೇವಲ ಒಂದು ಗ್ರಾಮದ ಪ್ರಶ್ನೆಯಲ್ಲ…
ಇದು ಭಕ್ತಿಯ ಗೌರವದ ಪ್ರಶ್ನೆ…
ರೈತರ ಬದುಕಿನ ಪ್ರಶ್ನೆ…
ಸರ್ಕಾರ ಸ್ಪಂದಿಸಬೇಕು ಎಂದು ಎಚ್ಚರಿಕೆಯನ್ನು ರೈತ ಸಂಘ ನೀಡಿದೆ.
ವರದಿ: ಹಣಮಂತ ಕುಡಹಳ್ಳಿ




