ಜೊಯಿಡಾ: ಬರುವ ದಿನಾಂಕ:03-01-2026 (ಶನಿವಾರ)ಸಮಯ: ಬೆಳಿಗ್ಗೆ 11:30 ಗಂಟೆಗೆ ಗಾವಡೆವಾಡದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಲಿದೆ.ಮಧ್ಯಾಹ್ನ 01:30 ರಿಂದ 05:00 ಗಂಟೆಯವರೆಗೆ ಅನ್ನ ಸಂತರ್ಪಣೆ ಮಹಾಪ್ರಸಾದ ನಡೆಯಲಿದೆ.ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ಭಕ್ತರು ಸ್ವೀಕರಿಸಿ, ಸಕಲ ಭಕ್ತರು ತಮ್ಮ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಎಲ್ಲಾ ಭಕ್ತಾದಿಗಳು ಮನಸ್ಪೂರ್ವಕವಾಗಿ ಭಾಗವಹಿಸಿ ಆರೋಗ್ಯ, ಐಶ್ವರ್ಯ, ಶಾಂತಿ ಮತ್ತು ನೆಮ್ಮದಿಯನ್ನು ತರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಶನಿವಾರ, ದಿನಾಂಕ 03-01-2026 ರಂದು ಅನ್ನ ಸಂತರ್ಪಣೆ ನಡೆಯಲಿದೆ. ಊರಿನ ವಿನೋದ ಮೀರಾಶಿ ಜೊಯಿಡಾ ಹಾಗೂ ದಾಂಡೇಲಿ ಮೋಹನ ಗುರುಸ್ವಾಮಿ ಇವರ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಗುವುದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆಯಲು ಎಲ್ಲಾ ಭಕ್ತರನ್ನು ಊರಿನ ಎಲ್ಲಾ ಸ್ವಾಮಿಗಳನ್ನು ಆಹ್ವಾನಿಸಲಾಗಿದೆ.




