ನವದೆಹಲಿ : ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವುದು ಭಾರತೀಯ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.
ಇದೇ ಮೊದಲ ಬಾರಿಗೆ ಪಥಸಂಚಲನದಲ್ಲಿ ಪ್ರಾಣಿಗಳು ಸಹ ಹೆಜ್ಜೆ ಹಾಕಲಿವೆ. ಈ ಪಟ್ಟಿಯಲ್ಲಿ ಕರ್ನಾಟಕದ ಪ್ರಸಿದ್ಧ ಮುಧೋಳ ನಾಯಿಗಳು ಸಹ ಸೇರಿವೆ.
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರಾಣಿಗಳ ಪರೇಡ್ ನಡೆಯಲಿದೆ.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಪ್ರಾಣಿಗಳು ಈ ಪರೇಡ್ನಲ್ಲಿ ಭಾಗವಹಿಸಲಿವೆ.
ದೇಶ ರಕ್ಷಣೆಯಲ್ಲಿ ತೊಡಗಿರುವ ಪ್ರಾಣಿಗಳನ್ನು ಪರಿಚಯಿಸುವುದು ಈ ಪ್ರಾಣಿಗಳ ಪರೇಡ್ ಉದ್ದೇಶವಾಗಿದೆ. ಕರ್ನಾಟಕದ ಮುಧೋಳ ನಾಯಿ, ಒಂಟೆಗಳು, ಕುದುರೆ, ಹದ್ದು, ಗಿಡುಗ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿವೆ.




