
ಬಾಲಿವುಡ್ ನಟಿ ಖುಷಿ ಮುಖರ್ಜಿ, ಭಾರತೀಯ ಕ್ರಿಕೆಟ್ ತಂಡದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಸೂರ್ಯಕುಮಾರ್ ಯಾದವ್ ಈ ಹಿಂದೆ ಆಗಾಗ್ಗೆ ನನಗೆ ಸಂದೇಶ ಕಳುಹಿಸುತ್ತಿದ್ದರು. ಆದರೆ, ಈಗ ಅವರು ನನ್ನೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂದು ಖುಷಿ ಹೇಳಿದ್ದಾರೆ.
ಯಾವುದೇ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೀರಾ ಎಂದು ವರದಿಗಾರರೊಬ್ಬರು ಕೇಳಿದಾಗ, ‘ತನಗೆ ಲಿಂಕ್-ಅಪ್‌ಗಳು ಇಷ್ಟವಿಲ್ಲ. ನಾನು ಯಾವುದೇ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ. ತುಂಬಾ ಕ್ರಿಕೆಟಿಗರು ಇದ್ದಾರೆ. ಸೂರ್ಯಕುಮಾರ್ ಯಾದವ್ ನನಗೆ ಬಹಳಷ್ಟು ಸಂದೇಶ ಕಳುಹಿಸುತ್ತಿದ್ದರು. ಈಗ ನಾವು ಹೆಚ್ಚು ಮಾತನಾಡುವುದಿಲ್ಲ ಮತ್ತು ನಾನು ಸಂಬಂಧ ಹೊಂದಲು ಸಹ ಬಯಸುವುದಿಲ್ಲ. ಈ ಹೇಳಿಕೆಗಳಿಗೆ ಸೂರ್ಯಕುಮಾರ್ ಯಾದವ್ ಇನ್ನೂ ಪ್ರತಿಕ್ರಿಯಿಸಿಲ್ಲ.




