ಚಿಕ್ಕಮಗಳೂರು: ವರದಕ್ಷಿಣೆಗಾಗಿ ಪತಿ ಮಹಾಶಯನೊಬ್ಬ ಪತ್ನಿಯನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ತರಿಕೆರೆ ತಾಲೂಕಿನ ನಂದಿಹೊಸಳ್ಳಿಯಲ್ಲಿ ನಡೆದಿದೆ.
ತಿಮ್ಮಪ್ಪ ಪತ್ನಿಯನ್ನೇ ಥಳಿಸಿರುವ ಪತಿ. 2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ವರದಕ್ಷಣೆ ಕಿರುಕುಳ ನೀಡಲಾರಂಭಿಸಿರುವ ತಿಮ್ಮಪ್ಪ, ಪತ್ನಿಗೆ ಹೊಡೆದು ತವರಿಂದ ಹಣ ತರುವಂತೆ ಹಿಂಸಿಸುತ್ತಿದ್ದಾನಂತೆ. ಅಲ್ಲದೇ ತಾನು ಎರಡನೇ ಮದುವೆಯಾಗುತ್ತೇನೆ. ನೀನು ಬೇಡ ಎಂದು ಪತ್ನಿಯನ್ನು ವಿವಸ್ತ್ರಗೊಳಿಸಿ ಮನಬಂದಂತೆ ಹೊಡೆದಿದ್ದು, ಬಾಯಿಗೆ ಬಂದಂತೆ ನಿಂದಿಸಿದ್ದಾನೆ ಎಂದು ಪತ್ನಿ ಕಣ್ಣಿರಿಟ್ಟಿದ್ದಾರೆ.
ಪತಿಯ ಹಿಂಸೆಯಿಂದ ನೊಂದ ಮಹಿಳೆ ಹೇಗೆ ಆತನಿಂದ ತಪ್ಪಿಸಿಕೊಂಡು ಮನೆಯ ಹಿಂಬಾಗಿಲಿಂದ ಓಡಿಹೋಗಿ ರಕ್ಷಿಸಿಕೊಂಡಿದ್ದಾಳೆ. ಬಳಿಕ ಲಿಂಗದಹಳ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ತಿಮ್ಮಪ್ಪ, ಆತನ ತಂದೆ ಸೆರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.




