Ad imageAd image

ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ : 3 ದಿನದಲ್ಲಿ 745.84 ಕೋಟಿ ರೂ. ಮದ್ಯ ಮಾರಾಟ

Bharath Vaibhav
ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ : 3 ದಿನದಲ್ಲಿ 745.84 ಕೋಟಿ ರೂ. ಮದ್ಯ ಮಾರಾಟ
WhatsApp Group Join Now
Telegram Group Join Now

ಬೆಂಗಳೂರು : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ದಾಖಲೆ ಮಟ್ಟದಲ್ಲಿ ಎಣ್ಣೆ ಸೇಲ್ ಆಗಿದೆ.ರಾಜ್ಯದಲ್ಲಿ ಹೊಸವರ್ಷಾಚರಣೆ ವೇಳೆ ಭರ್ಜರಿ ಮದ್ಯ ಸೇಲ್ ಆಗಿದ್ದು, , ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದೆ. 3 ದಿನದಲ್ಲಿ 745.84 ಕೋಟಿ ರೂ. ಮದ್ಯ ಮಾರಾಟವಾಗಿದೆ.

2025 ಡಿಸೆಂಬರ್ ತಿಂಗಳ ಕೊನೆಯ 3 ದಿನಗಳಲ್ಲಿ 745.84 ರೂ ಕೋಟಿ ಮೌಲ್ಯದ ಇಂಡಿಯನ್ ಮೇಡ್ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ.

ಇದರಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಹರಿದು ಬಂದಿದೆ. 2024 ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

2025ರ ಡಿಸೆಂಬರ್ 29, 30 ಮತ್ತು 31ರ ನಡುವೆ 3 ದಿನಗಳ ಅವಧಿಯಲ್ಲಿ 9.84 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ಡಿ.31ರಂದು 3.53 ಲಕ್ಷ ಬಾಕ್ಸ್ ಭಾರತೀಯ ಬಾಕ್ ಬಿಯರ್ ಮದ್ಯ ಹಾಗೂ 2.25 ಲಕ್ಷ ಬಾಕ್ಸ್ 2 ಮಾರಾಟವಾಗಿದೆ. 2024ರಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ₹266.73 ಕೋಟಿ ಆದಾಯ ಸಂಗ್ರಹವಾಗಿದ್ದರೆ, 2025ರಲ್ಲಿ 204 ಕೋಟಿ ಆದಾಯ ಬಂದಿದೆ.

2025ರ ಡಿಸೆಂಬರ್ ತಿಂಗಳಿನಲ್ಲಿ ಅಬಕಾರಿ ಆದಾಯ 3,559.08 ಕೋಟಿಗೆ ಏರಿಕೆಯಾಗಿದೆ. 2024ರ ಡಿಸೆಂಬರ್ನಲ್ಲಿ 3,104.50 ಕೋಟಿ ಆದಾಯ ಸಂಗ್ರ ಹವಾಗಿತ್ತು.

2024ರ ಡಿಸೆಂಬರ್ ತಿಂಗಳಲ್ಲಿ 61.82 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 37.62 ಲಕ್ಷ ಬಾಕ್ಸ್ ಬಿಯರ್ಮಾರಾಟವಾಗಿತ್ತು. 2025ರಲ್ಲಿ ಕ್ರಮವಾಗಿ 63.71 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 36.14 ಲಕ್ಸ ಬಾಕ್ಸ್ ಬಿಯರ್ ಮಾರಾಟವಾಗಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!