ಈಗ ವಿಶ್ವದಾದ್ಯಂತ ಟ್ವೆಂಟಿ-೨೦ ಲೀಗ್‌ಗಳು ಅತಿ ಹೆಚ್ಚಾಗಿ ನಡೆಯುತ್ತಿವೆ. ಐಸಿಸಿ ಸಹ ಚುಟುಕು ಮಾದರಿಯ ಕ್ರಿಕೆಟ್ ಆಯೋಜನೆ ಕುರಿತು ಆಸಕ್ತಿ ಹೊಂದಿದೆ. ಹೀಗಾಗಿ ಈಗ ಏಕದಿನ ಕ್ರಿಕೆಟ್‌ನ ಭವಿಷ್ಯ ಡೋಲಾಯಮಾನವಾಗಿದೆ ಎಂದು ಮಾಜಿ ಆಲರೌಂಡರ್ ಆರ್. ಅಶ್ವಿನ್ ಏಕದಿನ ಕ್ರಿಕೆಟ್ ಭವಿಷ್ಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದು, ೨೦೨೭ ರ ವಿಶ್ವಕಪ್ ನಂತರ ಏಕದಿನ ಮಾದರಿ ಕ್ರಿಕೆಟ್ ಉಳಿದುಕೊಳ್ಳುವುದು ತೀರಾ ಅನುಮಾನ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಟ್ವೆಂಟಿ-೨೦ ಹೆಚ್ಚಿನ ಪ್ರೋತ್ಸಾಹ ಇದೆ. ಟೆಸ್ಟ್ ಕ್ರಿಕೆಟ್ ಅದರದೇ ಆದ ಮಹತ್ವವನ್ನು ಪಡೆದುಕೊಂಡಿದ್ದು, ಈಗ ಟೆಸ್ಟ್ ಕ್ರಿಕೆಟ್ ಹಾಗೂ ಚುಟುಕು ಅಂದರೆ ಟ್ವೆಂಟಿ-೨೦ ಮಾದರಿ ಕ್ರಿಕೆಟ್ ಮಾತ್ರ ಉಳಿದುಕೊಂಡಿದೆ.
ಏಕದಿನ ಕ್ರಿಕೆಟ್ ಭವಿಷ್ಯ ಕುರಿತು ಅಶ್ವಿನ್ ಕಳವಳ




