ಬೈಲಹೊಂಗಲ: ತಾಲೂಕಿನ ಮರಕುಂಬಿ ಗ್ರಾಮದ ಶ್ರೀ ಚಕ್ರಸಮೇತ ಚಾಮುಂಡೇಶ್ವರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ೧೦-೧೫ ಸಾವಿರ ಜನರು ಬರುವ ನಿರೀಕ್ಷೆ ಇದ್ದು, ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ದತೆ ನಡೆದಿದೆ.
ದೇವಿಯ ಮಹಿಮೆ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಪ್ರಚಾರವಾಗಿದ್ದು, ಈಗಿನಿಂದಲೇ ಭಕ್ತರ ಸರದಿ ಸಾಲು ಎದ್ದು ಕಾಣುತ್ತಿದೆ. ಇದರಿಂದ ಜಾತ್ರಾ ಕಮೀಟಿ ಜಾಗೃತವಾಗಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಅನ್ನಪ್ರಸಾದ- ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಜಾತ್ರೆಯ ಎಲ್ಲ ಸಿದ್ದತೆಗಳತ್ತ ಕಮೀಟಿ ಗಮನ ಹರಿಸಿದೆ.
ಬೈಲಹೊಂಗಲಕ್ಕೆ ಪಟ್ಟಣಕ್ಕೆ ಹೊಂದಿಕೊAಡು ಇರುವ ಗ್ರಾಮ ಮರಕುಂಬಿ ಸುತ್ತಮುತ್ತ ಹಲವಾರು ಸಮೀಪದ ಊರುಗಳಿದ್ದು, ಭಕ್ತರು ಹರಿದು ಬರುವ ನಿರೀಕ್ಷೆ ಇದೆ. ಯರಗಟ್ಟಿ, ಸವದತ್ತಿಯಿಂದ ಭಕ್ತರು ಹರಿದು ಬರುವ ಸಾಧ್ಯತೆ ಇದ್ದು, ಈಗಿನಿಂದಲೇ ದೇವಿಯ ಭಕ್ತರು ದೇವಸ್ಥಾನದತ್ತ ಬರುತ್ತಿದ್ದಾರೆ.
ಜನವರಿ ೫ ರಿಂದ ಜಾತ್ರೆ ಆರಂಭವಾಗಲಿದ್ದು, ಜನವರಿ ೫ ರಂದು ಸುತ್ತಲಿನ ೫೦ ಗ್ರಾಮಗಳಿಂದ ಪಲ್ಲಕ್ಕಿಗಳು ಬರಲಿವೆ. ದೇವರಿಗೆ ಊಡಿ ತುಂಬುವ ಕರ್ಯಕ್ರಮ ಹಾಗೂ ಸಾಮೂಹಿಕ ವಿವಾಹಗಳು ಜರುಗಲಿವೆ. ದೇವಸ್ಥಾನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ವಿಶೇಷ ಗೋಷ್ಠಿಗಳು ಜರುಗಲಿವೆ ಎಂದು ರ್ಮರ್ಶಿ ಡಾ. ಬಿ.ಬಿ. ಮಲ್ಲೇಶ ತಿಳಿಸಿದ್ದಾರೆ.
ಚಾಮುಂಡೇಶ್ವರಿ ದೇವಿ ಜಾತ್ರೆಗೆ ಭರದ ಸಿದ್ದತೆ




