ಕ್ರಿಕೆಟಿಗನೊಬ್ಬ ಪ್ಯಾಲೆಸ್ಟೀನಿಯನ್ ಧ್ವಜವನ್ನು ಬಳಸಿದ ವಿವಾದ ಭುಗಿಲೆದ್ದಿದೆ. ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್‌ನಲ್ಲಿ ಪಂದ್ಯ ಆಡುವಾಗ ಫರ್ಖಾನ್ ಭಟ್ ತಮ್ಮ ಹೆಲ್ಮೆಟ್‌ನಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಬಳಸಿದ್ದರು.
ನಿನ್ನೆಯ ಜಮ್ಮು ಟ್ರೈಲ್‌ಬ್ಲೇಜರ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಭಟ್ ಸ್ಥಳೀಯ ಜೆಕೆ 11 ತಂಡವನ್ನು ಪ್ರತಿನಿಧಿಸುತ್ತಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಜಮ್ಮು ಗ್ರಾಮೀಣ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.



