Ad imageAd image

ಉತ್ತರಾಖಂಡ ‘ಸಾಹು’ ನ ಹೇಳಿಕೆಗೆ ತೀವ್ರ ವಿರೋಧ

Bharath Vaibhav
ಉತ್ತರಾಖಂಡ ‘ಸಾಹು’ ನ ಹೇಳಿಕೆಗೆ ತೀವ್ರ ವಿರೋಧ
WhatsApp Group Join Now
Telegram Group Join Now

———————————ಮಹಿಳೆಯರ ಕುರಿತು ಅವಹೇನಕಾರಿ ಪದ ಬಳಕೆ

ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಸಣ್ಣತನವನ್ನು ಪ್ರದರ‍್ಶಿಸುವ ಹಾಗೂ ವ್ಯಾಪಕ ಟೀಕೆಗೆ ಗುರಿಯಾಗುವ ವ್ಯಕ್ತಿಗಳಿಗೆ ನಮ್ಮ ಸಮಾಜದಲ್ಲಿ ಕಡಿಮೆ ಇಲ್ಲ.
ಇಂಥ ಬಾಯಿ ಚಪಲದ ವ್ಯಕ್ತಿಗಳು ನಮಲ್ಲಿ ತುಂಬಾನೇ ಇದ್ದಾರೆ. ಈ ಸಾಲಿನಲ್ಲಿ ಮತ್ತೊರ‍್ವ ಗಿರಾಕಿ ನಮಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗುರಿಯಾದವರೆಂದರೆ ಉತ್ತರಾಖಂಡದ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ರ‍್ಯ ಅವರ ಪತಿ ಗರ‍್ಧಾರಿ ಲಾಲ್ ಸಾಹು ಅವರೇ ಈ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಒಂದು ರಾಜ್ಯದ ಜವಾಬ್ದಾರಿ ಖಾತೆ ಹೊಂದಿರುವ ಸಚಿವೆಯೊಬ್ಬರ ಪತಿಯಾಗಿ ಇಂಥ ಬೇಕಾಬಿಟ್ಟಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಸಾಹು. ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ತಮ್ಮ ಬಾಯಿ ಚಪಲ ತೋರಿದ ಸಾಹು, ೨೦,೦೦೦ ರಿಂದ ೨೫,೦೦೦ ರೂ.ಗೆ ಬಿಹಾರದ ಹುಡುಗಿಯರನ್ನು ಮದುವೆ ವ್ಯವಸ್ಥೆ ಮಾಡಬಹುದು ಎಂದು ಹೇಳಿಕೆ ನೀಡುವ ಮೂಲಕ ಉತ್ತರಾಖಂಡದ ಈ ಮಹಾಶಯ ತಮ್ಮ ಬಾಯಿ ಚಪಲ ಸಮಾಜಕ್ಕೆ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ಈ ಉಡಾಫೆ ಹೇಳಿಕೆ ನೀಡಿರುವ ಈ ಮಹಾಶಯ, ನನ್ನೊಂದಿಗೆ ಬನ್ನಿ ಬಿಹಾರದ ಹುಡುಗಿಯರನ್ನು ಇಷ್ಟು ಹಣಕ್ಕೆ ನಾನು ಮದುವೆ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಈ ಮಹಾಶಯ. ‘ಸಾಹು’ ನ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಹಿಳಾ ಸಂಘಗಳು ಸಾಹು ನ ಹೇಳಿಕೆಗೆ ಕೆರಳಿ ಕೆಂಡವಾಗಿವೆ.
ಇನ್ನಾದರೂ ಇಂಥ ಮಹಾಶಯವರು ತಮ್ಮ ಬಾಯಿ ಚಪಲದ ಚಟ ಬಿಟ್ಟು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕಾಗಿದೆ. ಸಮಾಜದಲ್ಲಿ ನಾವು ಮಹಿಳೆಯರಿಗೆ ಗೌರವದ ಸ್ಥಾನ ನೀಡಬೇಕೆಂದು ಇಂಥವರಿಗೆ ಎಂದು ಜ್ಞಾನ ಬರುವುದು ಎಂದು ಕಾಯಬೇಕಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!