ಅಂದು ೧೬೯೬ ಶಿವಾಜಿ ಮಹಾರಾಜರ ಮಗನಾದ ಶಾಂಭಾಜಿ ಬೋಸ್ಲೇಯನ್ನು ಮೊಘಲರ ಸಾಮ್ರಾಟ ಔರಂಗಜೇಬನು ಸಾಂಬಾಜಿಯನ್ನು ಬಂಧಿಸಿ ಅವನನ್ನು ಕೊಲೆ ಮಾಡಿ ಅವನ ದೇಹವನ್ನು ತುಂಡು ತುಂಡು ಮಾಡಿ ಕೊರೆಗಾವ್ ಗ್ರಾಮದಿಂದ ೩ ಕಿಲೋಮೀಟರ್ ದೂರದಲ್ಲಿರುವ ಒಡೂಬದ್ರುಕ ಗ್ರಾಮದಲ್ಲಿ ಬಿಸಾಡಿರುತ್ತಾರೆ . ಸಾಂಭಾಜಿ ಮಹಾರಾಜರನ್ನು ಯಾರು ಅಂತ್ಯ ಸಂಸ್ಕಾರ ಮಾಡಬಾರದು ಎಂದು ಆಜ್ಞೆ ಹೊರಡಿಸಿರುತ್ತಾನೆ. ಇದಕ್ಕೆ ಹೆದರಿದ ಪೇಶ್ವೆ ಆಡಳಿತಗಾರರು ಶಿವಾಜಿ ಮಗನನ್ನು ಹತ್ಯೆಯಾದರೂ ಕಣ್ಣೆತ್ತಿ ನೋಡಿರುವುದಿಲ್ಲ. ಔರಂಗಜೇಬನ ಆಜ್ಞೆಯನ್ನು ಧಿಕ್ಕರಿಸಿದ ಗೋವಿಂದ್ ಗೋಪಾಲರು ಪುನಃ ಸಾಂಭಾಜಿ ದೇಹವನ್ನು ಹೊಲೆದು ಓಡುಭದ್ರಕ ಗ್ರಾಮದಲ್ಲಿ ರಾಜ್ಯ ಮಾರಾದೆಯಿಂದ ಅತ್ಯಸಂಸ್ಕಾರ ಮಾಡಿರುತ್ತಾನೆ. ಶಿವಾಜಿ ಮಹಾರಾಜರ ಸಾಮ್ರಾಜ್ಯವನ್ನು ಹೈಜಾಕ್ ಮಾಡಿದ ಪೇಸ್ವಿಗಳು ಶಿವಾಜಿ ಕುಡಿಗಳನ್ನು ಯಾವ ತರ ನಡೆಸಿಕೊಂಡಿದ್ದಾರೆ ಎಂಬುದು ಇದರ ಮೂಲಕ ನಾವು ತಿಳಿಯಬಹುದಾಗಿದೆ. ದಲಿತ ಜನಾಂಗದ ಶಿವಾಜಿಯನ್ನು ಪೆಶ್ವಿಗಳು ಮೊಘಲರ ಜೊತೆ ಸೇರಿಕೊಂಡು ಅವನ ಸಾಮ್ರಾಜ್ಯದಲ್ಲಿ ಅವನನ್ನೇ ಮೂಲೆಗುಂಪು ಮಾಡಿರುತ್ತಾರೆ. ಮಾನವ ಜನಾಂಗದ ವಿರೋಧಿಗಳಾದ ಪೇಶ್ವೆಗಳು ಶಿವಾಜಿಯ ಮರಣಾಂತರ ದಲಿತರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿರುತ್ತಾರೆ ಅದಕ್ಕೆ ಮುಂದೆ ದಲಿತರ ಕಿಚ್ಚು ಸ್ಫೋಟಗೊಂಡಿದ್ದು ೧೮೧೮ರ ಕೋರೆಗಾವ್ ಯುದ್ಧದಲ್ಲಿ.

ಜನವರಿ ಒಂದನೇ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ್ಪೃಶ್ಯರ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ , ಈ ದಿನ ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ದ . ಈ ಘಟನೆ ಡಾ . ಅಂಬೇಡ್ಕರ್ರವರ ಹೋರಾಟಗಳ ಬದುಕಿನ ಪ್ರೇರಣೆಗಳಲ್ಲಿ ಒಂದೂ ಹೌದು . ಕ್ರಿ . ಶ . ೧೮೦೦ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವಗಳು ಆಡಳಿತ ನಡೆಸುತ್ತಿದ್ದರು . ಇವರ ಆಡಳಿತವು ಅಸ್ಪೃಶ್ಯರ ಪಾಲಿನ ಕರಾಳ ಚರಿತ್ರೆಯಾಗಿತ್ತು . ಅಸ್ಪಶ್ಯತೆ ಆಚರಣೆಯ ಕಠೋರತೆಯು ಅಮಾನುಷವಾಗಿತು.ಅಸ್ಪೃಶರ ನೆರಳು ಹಿಂದೂ ಸವರ್ಣಿಯ ಮೇಲೆ ಬಿದ್ದರೆ , ಹಿಂದೂ ಸವರ್ಣಿಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವನ
ಸಾಯಬಣ್ಣ ಮಾದರ (ಸಲಾದಹಳ್ಳಿ)




