———————ಸಮ್ಮೇಳನ ಯಶಸ್ವಿಗೊಳಿಸಲು ಶಾಸಕ ಬಾಬಾಸಾಹೇಬ್ ಮನವಿ
ಬೈಲಹೊಂಗಲ: ಜನವರಿ ೬ ರಂದು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜರುಗುವ ೮ ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವುದಕ್ಕೆ ಸಂಬAಧಿಸಿದAತೆ ರ‍್ಚೆ ಮಾಡಲು ಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪರ‍್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಸಕ ಬಾಬಾಸಾಹೇಬ್ ಪಾಟೀಲ್, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನೇಗಿನಹಾಳ ಗ್ರಾಮದಲ್ಲಿ ನಡೆಯತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಹೀಗಾಗಿ ಈ ಸಮ್ಮೇಳವನ್ನು ಅತ್ಯಂತ ಯಶಸ್ವಿ ರೀತಿಯಿಂದ ನಡೆಸೋಣ ಎಂದರು.
ಕೆಪಿಸಿಸಿ ಸದಸ್ಯೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆಯಾಗಿರುವ ರೋಹಿಣಿ ಪಾಟೀಲ್ ಅವರು ಮಾತನಾಡಿ ಸಮ್ಮೇಳನ ನೇಗಿನಹಾಳ ಗ್ರಾಮದಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತಸ, ಸೌಭಾಗ್ಯದ ಸಂಗತಿ. ಸಮ್ಮೇಳನದ ಉದ್ಘಾಟಕರಾಗಿ ಚಂದ್ರಶೇಖರ ಕಮ್ಮಾರ ಆಗಮಿಸುತ್ತಿದ್ದಾರೆ ಎಂದರು.
ಸಾಹಿತಿ ಪ್ರೋ.ಕೆ.ಎಸ್. ಕೌಜಲಗಿ ರ‍್ವಾಧ್ಯಕ್ಷರಾಗಿ ಆಗಮಿಸುವರು. ಸಾಹಿತಿಗಳು, ಕನ್ನಡಾಭಿಮಾನಿಗಳು, ಕವಿಗಳು ಕನ್ನಡ ಸೇವಕರು, ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವರು. ಇದರಿಂದ ಎಲ್ಲರೂ ವಿಶೇಷ ಕಾಳಜಿ ವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕಾಗಿದೆ ಎಂದರು.
ತಹಸೀಲ್ದಾರ ಎಚ್. ಎನ್. ಶಿರಹಟ್ಟಿ, ತಾ.ಪಂ. ಸಿಇಓ ಜಂಜೀವ ಜುನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ, ವಿರೇಶ ಹಸಬಿ ವೇದಿಕೆಯಲ್ಲಿದ್ದರು.
ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಎನ್. ಆರ್. ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಕನ್ನಡಾಭಿಮಾನಿಗಳು ಸುತ್ತಲಿನ ಗ್ರಾಮಗಳ ಮುಖಂಡರು ಇದ್ದರು.
ಜ. ೬ ರಂದು ನೇಗಿನಹಾಳದಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ




