Ad imageAd image

ಮರ್ಯಾದೆ ಹತ್ಯೆ ಖಂಡಿಸಿ ಪ್ರತಿಭಟನೆ

Bharath Vaibhav
ಮರ್ಯಾದೆ ಹತ್ಯೆ ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಗದಗ : ನರಗುಂದದಲ್ಲಿ ಹುಬ್ಬಳ್ಳಿ- ಸೊಲ್ಲಾಪುರ್ ರಾಷ್ಟ್ರಿಯ ಹೇದ್ದಾರಿ ತಡೆದು ಹುಬ್ಬಳ್ಳಿ ತಾಲ್ಲೂಕಿನ ಇನಾಮ್ ವೀರಾಪುರ ಗ್ರಾಮದಲ್ಲಿ ದಲಿತ ಯುವಕ ವಿವೇಕಾನಂದ ಹರಿಜನ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಹಾಗೂ ಗರ್ಭಿಣಿಯಾದ ಮಾನ್ಯ ಪಾಟೀಲ ಯುವತಿಯ ಮರ್ಯಾದೆ ಹತ್ಯೆ ಖಂಡಿಸಿ ನರಗುಂದದಲ್ಲಿ ದಲಿತ ಪರ ಸಂಘಟನೆಗಳು ಕನ್ನಡಪರ ಸಂಘಟನೆಗಳು ವಿವಿಧ ಪರ ಸಂಘಟನೆಗಳ ಒಕ್ಕೂಟದಿಂದ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತು ಪ್ರತಿಭಟನೆ ಉದ್ದೇಶಿಸಿ ದಲಿತ ಸಮುದಾಯದ ಮುಖಂಡರು ಎಫ್ ವೈ ದೊಡ್ಡಮನಿ ಮತ್ತು ವಸಂತ ಜೋಗಣ್ಣವರ ಮಾತನಾಡಿ ಜಾತಿ ವ್ಯವಸ್ಥೆ ಇನ್ನೂ ತುಂಬಾ ಇದೆ ಇಂತಹ ಮರ್ಯಾದೆ ಹತ್ಯೆಯನ್ನು ಖಂಡಿಸಲು ಕಾನೂನನ್ನು ಗಟ್ಟಿಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಕ ದ ಸಂ ಸ ನರಗುಂದ ಸಂಚಾಲಕರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ ಜಾತಿಯಿಲ್ಲ, ಜಾತಿ ಬೇಡ, ಜಾತಿಯಿಂದ ಆಚೆ ಬನ್ನಿ ಹೀಗೆ ಬೇರೆ ವರ್ಗದವರು ಮತ್ತು ಇತ್ತೀಚೆಗೆ ನಮ್ಮವರು ಹೇಳುವುದು ಸಾಮಾನ್ಯವಾಗಿದೆ ಮಗುವಿನಿಂದ ಸಾಕಿ ತನ್ನ ಸ್ವಂತ ಮಗಳನ್ನೇ ಕೊಲೆ ಮಾಡುವಂತಹ ಮನಸ್ಥಿತಿಯನ್ನು ಪ್ರೇರೇಪಿಸಿದ್ದು ಜಾತಿಯಲ್ಲವೇ ಈ ಜಾತಿಗಳ ಮೂಲ ಬೇರು ವರ್ಣಾಶ್ರಮದ ಆಚರಣೆಯಲ್ಲವೇ ಮಗಳನ್ನು ಕೊಂದ ತಂದೆಯ ಜಾತಿಯವರು ಇದರಿಂದ ನೊಂದುಕೊಂಡಿದ್ದಾರೋ ಅಥವಾ ಖುಷಿಯಾಗಿದ್ದರೋ ಗೊತ್ತಿಲ್ಲ ಆದರೆ ನಮಗಂತೂ ಪ್ರಪಂಚವನ್ನೇ ಕಾಣದ ಪುಟ್ಟ ಮಗುವಿನ ಗರ್ಭಿಣಿಯನ್ನು ಸಾಯಿಸಿದ್ದು ಹೇಯ ಕೃತ್ಯ ಅನ್ನಿಸಿದೆ ಎಂದು ಆಕ್ರೋಶ ವ್ಯಕ್ತ ಪಡಸಿದರು.

ಇದೆ ಸಂದರ್ಭದಲ್ಲಿ ಯುವ ಹೋರಾಟಗಾರರು ಡಾ ಮುತ್ತು ಸುರಕೋಡ ಮತ್ತು ವಿಜಯ ಛಲವಾದಿ ಮಾತನಾಡಿ ದಲಿತ ಸಮುದಾಯದವರ ಜೊತೆ ಸಂಬಂಧ ಮಾಡಿಕೊಂಡರೆ ಈ ತರಹ ವಿಕೃತ ಹಂತಕ್ಕೆ ಯೋಚಿಸುತ್ತಾರೆ ಎಂಬಾ ನೋವು ಕಾಡುತ್ತದೆ ಇಂತಹ ಘಟನೆಗಳು ನಿಲ್ಲಬೇಕು ಇಲ್ಲದಿದ್ದರೇ ಮನುಕುಲಕ್ಕೆ ಅವಮಾನ ಎಂದರು ಅಲದೇ ಗುರುನಾಥ ಕೆಂಗಾರಕರ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರು ಸಮಾನತೆಗೆ ಹೋರಾಡಿದ ನಾಯಕರು ಅವರ ನಾಡಲ್ಲಿ ಈ ರೀತಿಯ ವಿಕೃತಿ ಅವರ ಆಸೆಯ ತತ್ವಗಳಿಗೆ ವಿರುದ್ಧವಾಗಿದೆ ಇಂತಹ ಮನ ಕಲಕುವ ಘಟನೆಯನ್ನು ಮಾಡಿದ ಆರೋಪಿಗಳನ್ನು ಮರಣದಂಡೆಗೆ ವಿಧಿಸಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿದರು ಪ್ರತಿಭಟನಾಕಾರರು ತಸಿಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಹ ಇದೇ ಸಂದರ್ಭದಲ್ಲಿ ಸಲ್ಲಿಸಲಾಯಿತು ಪ್ರತಿಭಟನೆಯಲ್ಲಿ ಯಶವಂತ್ ಚಲವಾದಿ ದುರಗಪ್ಪ ಜೋಗಣ್ಣವರ ಸಣ್ಣದುರ್ಗಪ್ಪ ದಂಡಾಪುರ ಪುನೀತ ಜೋಗಣ್ಣವರ ವಿಕ್ರಂ ಹೊನ್ನಕೇರಿ ಪ್ರಶಾಂತ್ ತಡಸಿ ಕಿರಣ ಜೋಗಣ್ಣವರ ನಬಿಸಬಾ ಕಿಲ್ಲದಾರ ವಿಜಯ್ ಬಡಿಗೇರ ಶರಣು ಛಲವಾದಿ ಖಾಜು ಕಿಲ್ಲದಾರ್ ನವೀನ್ ಜೋಗನ್ನವರ ಮಾಂತೇಶ ಪೂಜಾರ ಸಿದ್ದು ಕೆಲಗೇರಿ ಮುತ್ತು ಪೂಜಾರ ಪ್ರವೀಣ ಬಾಂಗಿ ರವಿ ಚಿಂತಾಲ್ ಹಸನ ಮೇಸ್ತ್ರಿ ಶ್ರೀಕಾಂತ ಜೋಗಣ್ಣವರ ಅರ್ಜುನ ಮಾದರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ : ಅಣ್ಣಪ್ಪ ಗುತ್ತೆಮ್ಮನವರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!