Ad imageAd image

ನಟ ಯಶ್ ಗೆ ಭೂ ಒತ್ತುವರಿ ತೆರವು ಶಾಕ್ : ಅಕ್ರಮವಾಗಿ ನಿರ್ಮಾಣ ಮಾಡಿದ ಕಾಂಪೌಂಡ್ ತೆರವು 

Bharath Vaibhav
ನಟ ಯಶ್ ಗೆ ಭೂ ಒತ್ತುವರಿ ತೆರವು ಶಾಕ್ : ಅಕ್ರಮವಾಗಿ ನಿರ್ಮಾಣ ಮಾಡಿದ ಕಾಂಪೌಂಡ್ ತೆರವು 
WhatsApp Group Join Now
Telegram Group Join Now

ಹಾಸನ: ರಾಕಿಂಗ್ ಸ್ಟಾರ್ ಯಶ್ ಗೆ ಭೂ ಒತ್ತುವರಿ ತೆರವು ಶಾಕ್ ನೀಡಲಾಗಿದೆ. ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್ ನ್ನು ತೆರವು ಮಾಡಲಾಗಿದೆ.

ಹಾಸನದ ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ನಿರ್ಮಿಸಲಾಗಿತ್ತು.

ಮನೆಯ ಸುತ್ತಲು 1500 ಅಡಿಗಳಷ್ಟು ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಜಾಗದ ಮಾಲೀಕರು ಆರೋಪಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ಕೋರ್ಟ್ ಆದೇಶದ ಮೇರೆಗೆ ಕೋರ್ಟ್ ನಿಂದ ಅನುಮತಿ ಪಡೆದು ಲಕ್ಷ್ಮ್ಮಮ್ಮ ಜಾಗದಲ್ಲಿ ನಿರ್ಮಿಸಿಇದ್ದ ಅಕ್ರಮ ಕಾಂಪೌಂಡ್ ಗಳನ್ನು ಜೆಸಿಬಿ ಮೂಲಕವಾಗಿ ತೆರವುಗೊಳಿಸಲಾಗಿದೆ.

ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳಂಬೆಳಿಗ್ಗೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗಳನ್ನು ಕೆಡವಲಾಯಿತು.

ಕಾಂಪೌಂಡ್ ತೆರವು ಮಾಡುತ್ತಿದ್ದಂತೆ ನಟ ಯಶ್ ತಾಯಿ ಪುಷ್ಪ ಪರ ವಕೀಲರು ಸ್ಥಳಕ್ಕೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!