ಬೆಳಗಾವಿ: ಸ್ಥಳೀಯ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಲ್ಲಿನ ಸರದಾರ ಹೈಸ್ಕೂಲ್ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಸ್ಥಳೀಯ ಕ್ರಿಕೆಟ್ ಪ್ರತಿಬೆಗಳು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಶಾಸಕ ಅಭಯ ಪಾಟೀಲ್ ನುಡಿದರು.
ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರ ಜನ್ಮದಿನದ ಪ್ರಯುಕ್ತ ಮಹಾಂತೇಶ ಕವಟಗಿಮಠ ಪೌಂಡೇಶನ್ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಎರಡನೇ ಆವೃತ್ತಿಯ ಮಹಾಂತೇಶ ಕವಟಗಿಮಠ ಟ್ರೋಫಿ ಪಂದ್ಯಾವಳಿಯಲ್ಲಿ ಹೊರ ರಾಜ್ಯಗಳ ತಂಡಗಳೂ ಸೇರಿದಂತೆ ೪೮ ತಂಡಗಳು ಪಾಲ್ಗೊಂಡಿದ್ದು, ಟರ‍್ನಿ ಜನವರಿ ೪ ರಿಂದ ೧೬ ರವರೆಗೆ ನಡೆಯಲಿದೆ.
ಈ ಸಂರ‍್ಭದಲ್ಲಿ ಉಪಮೇಯರ್ ವಾಣಿ ಜೋಶಿ, ಮಹಾನಗರ ಪಾಲಿಕೆ ಸದಸ್ಯರಾದ ಹನಮಂತ ಕೊಂಗಾಲಿ, ಅಭಿಜಿತ್ ಜವಳಕರ, ಗಿರೀಶ ಧೋಂಗಡಿ, ರೇಷ್ಮಾ ಪಾಟೀಲ್, ಆನಂದ ಚವ್ಹಾಣ, ಮುಖಂಡರಾದ ಎಂ.ಬಿ. ಝಿರಲಿ, ಗೀತಾ ಸುತಾರ, ಶಿವಾಜಿ ಸುಂಠಕರ ಇದ್ದರು.
ಎರಡನೇ ಆವೃತ್ತಿಯ ‘ಮಹಾಂತೇಶ ಕವಟಗಿಮಠ ಟ್ರೋಫಿ’ ಗೆ ಚಾಲನೆ




