ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ್ಯ ನಿಂಗಪ್ಪ ಕರೆಣ್ಣವರ ಮೇಲೆ ಹಲ್ಲೆ ನಡೆದ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಮೊದಲು ಶಾಸಕ ಲಕ್ಷ್ಮಣ ಸವದಿ ಅವರು ಅವರ ವಿರೋಧಿಗಳನ್ನು ಮೊದಲು ಯಾರಿಂದಾದರು ಹಲ್ಲೆ ಮಾಡಿಸುತ್ತಿದ್ದರು. ಈಗ ಅವರೇ ಮಾಡುತ್ತಿದ್ದಾರೆ. ಒಬ್ಬ ಶಾಸಕರಾಗಿ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಮಾಡಿದ್ದು ಖಂಡಿಸುತ್ತೇನೆ. ಅಥಣಿ ತಾಲೂಕು ಬಿಹಾರ ಆಗುತ್ತಿದೆ. ಯಾರು ಕಾನೂನು ಕೈಗೆತ್ತಿಕೊಂಡಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಮ್ಮ ಅಳಿಯನ ವರ್ಗಾವಣೆ ವಿಚಾರ ಸಂಬಂಧವೇ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಮೊದಲು ಮಹಿಳೆಯರ ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರ ಕುಟುಂಬಕ್ಕೂ ಲಕ್ಷ್ಮಣ ಸವದಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ವಿಷಯ ಗೋಕಾಕದವರು ಪ್ರಚೋದನೆ ಮಾಡಿದ್ದಾರೆ ಅಂತಾರೇ, ಶಾಸಕ ಸವದಿ ಅವರಿಗೆ ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ್ಯ ನಿಂಗಪ್ಪ ಕರೆಣ್ಣವರ ಮನೆಗೆ ಬಂದಾಗ ಗೋಕಾಕದವರು ಹಲ್ಲೆ ಮಾಡು ಅಂತಾ ಹೇಳಿದ್ದರಾ?. ಒಬ್ಬ ಶಾಸಕನಾದವನಿಗೆ ತಮ್ಮದೇ ಆದ ಜವಾಬ್ದಾರಿಗಳು ಇರುತ್ತವೆ. ಜವಾಬ್ದಾರಿ ಮೆರೆತು ವರ್ತಿಸಬಾರದು ಎಂದು ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.




