Ad imageAd image

ಹಲ್ಲೆ ಪ್ರಕರಣ : ಲಕ್ಷ್ಮಣ ಸವದಿ ಹಾಗೂ ಪುತ್ರ ಸೇರಿ 8 ಜನರ ವಿರುದ್ಧ ಎಫ್‌ಐಆರ್

Bharath Vaibhav
ಹಲ್ಲೆ ಪ್ರಕರಣ : ಲಕ್ಷ್ಮಣ ಸವದಿ ಹಾಗೂ ಪುತ್ರ ಸೇರಿ 8 ಜನರ ವಿರುದ್ಧ ಎಫ್‌ಐಆರ್
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯ ಕೇಂದ್ರ ಸಹಕಾರಿ ಬ್ಯಾಂಕ್ (DCC) ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. BNS ಕಾಯ್ದೆ 189(2), 191(2), 115(2), 351(2), 352 (2), 190 ಕಲಂ‌ ಅಡಿ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹೀಗಾಗಿ ಶಾಸಕ ಸವದಿ, ಪುತ್ರ ಚಿದಾನಂದ ಸೇರಿದಂತೆ ಒಟ್ಟು 8 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನನ್ನನ್ನು ಲಕ್ಷ್ಮಣ್​ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಲಕ್ಷ್ಮಣ ಸವದಿ ಅವರೇ ಕಪಾಳಕ್ಕೆ ಹೊಡೆದರು.

ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದರು. ಬಳಿಕ ಕುಸಿದು ನೆಲಕ್ಕೆ ಬಿದ್ದ ನನ್ನ ಮೇಲೆ 7ರಿಂದ 8 ಜನರು ಹಲ್ಲೆ ನಡೆಸಿದರು ಎಂದು ನಿಂಗರಾಜ ಕರೆಣ್ಣವರ ಆರೋಪಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!