ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಅಥಣಿ ಠಾಣೆಯಲ್ಲಿ ಶಾಸಕ ಲಕ್ಷö್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಅವರ ಬೆಂಬಲಿಗರ ಮೇಲೆ ದೂರು ದಾಖಲಾದ ಬೆನ್ನಲ್ಲೆ ಇದೀಗ ಶಾಸಕ ಸವದಿ ಅವರ ಬಂಧನವಾಗಬೇಕೆAದು ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಲಕ್ಷö್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರನ್ನು ಬಂಧಿಸದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಬಳ್ಳಾರಿ ಘಟನೆ ಬೆನ್ನಲ್ಲೆ ಅಥಣಿಯಲ್ಲೂ ಕಾಂಗ್ರೆಸ್ ಶಾಸಕರಿಂದ ಹಲ್ಲೆಯಾಗಿದೆ ಎಂದು ಆರೋಪಿಸಿದ ಅವರು, ಅವರಿಗೆ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇವರ ವಿರುದ್ಧ ದೂರು ದಾಖಲಾದರೂ ಬಂಧನವಾಗಿಲ್ಲ ಎಂದು ಅವರು ದೂರಿದರು.
ಶಾಸಕ ಲಕ್ಷö್ಮಣ ಸವದಿ ಬಂಧನಕ್ಕೆ ಒತ್ತಾಯ




