Ad imageAd image

ಮೇದಕ್ ಶಾಲೆಯ ಮದ್ಯಾಹ್ನದ ಊಟದ ಅಕ್ಕಿಯಲ್ಲಿ ಹುಳ ಮತ್ತು ಕಲ್ಲುಗಳು:ನರೇಶ್ ಆಕ್ರೋಶ.

Bharath Vaibhav
ಮೇದಕ್ ಶಾಲೆಯ ಮದ್ಯಾಹ್ನದ ಊಟದ ಅಕ್ಕಿಯಲ್ಲಿ ಹುಳ ಮತ್ತು ಕಲ್ಲುಗಳು:ನರೇಶ್ ಆಕ್ರೋಶ.
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಮೇದಕ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಲಾದ ಬಿಸಿ ಊಟದಲ್ಲಿ ಹುಳ ಹಾಗೂ ಕಲ್ಲು ಪತ್ತೆಯಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದೆ.

ಈ ಅವ್ಯವಸ್ಥಿತ ಆಹಾರ ಸೇವನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ವಾಂತಿ ಸೇರಿದಂತೆ ವಿವಿಧ ಆರೋಗ್ಯ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

ಈ ಕುರಿತು ಊರಿನ ಸಾರ್ವಜನಿಕರು ಶಾಲೆಯ ಮುಖ್ಯಗುರುಗಳ ಗಮನಕ್ಕೆ ತಂದಿದ್ದರೂ, ಯಾವುದೇ ರೀತಿಯ ಸ್ಪಂದನೆ ಅಥವಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ.

ಇದು ಮಕ್ಕಳ ಜೀವ ಮತ್ತು ಆರೋಗ್ಯದ ಮೇಲೆ ಆಟವಾಡುವಂತಾಗಿದೆ.
ಆದ್ದರಿಂದ, ಈ ವಿಷಯ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಹಾಗೂ ಹೊಣೆಗಾರ ಸಿಬ್ಬಂದಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಯುವ ಸೇನೆ ವಲಯ ಅಧ್ಯಕ್ಷರಾದ ನರೇಶ್ ಏ ನಾಟಿಕರ್ ಅವರು ಬಲವಾಗಿ ಆಗ್ರಹಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಶಾಲೆಯನ್ನು ಮುಚ್ಚಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗುತ್ತದೆ ಎಂದು ಹೇಳಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!