ಸೇಡಂ : ಯಾನಗುಂದಿ ಕ್ಷೇತ್ರ ಶ್ರೀಶ್ರೀಶ್ರೀ ಮಹಾಯೋಗಿನಿ ಮಾಣಿಕೇಶ್ವರಿ ಅಮ್ಮನವರ ಆಶ್ರಮದಲ್ಲಿ ಇತ್ತೀಚಿನಿಂದ ನಡೆಯುತ್ತಿರುವ ಆಶ್ರಮದ ಟ್ರಸ್ಟ್ ನ ಅವ್ಯವಹಾರ ಮತ್ತು ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಅಪಾರ ಭಕ್ತರ ಬೇಡಿಕೆಯ ಮೇರೆಗೆ ಅಮ್ಮನವರ ಅತ್ಯಂತ ಆಪ್ತ ಸೇವಕರು, ಆಶ್ರಮದ ಪ್ರತಿನಿಧಿಗಳಾದ ಶ್ರೀ ವೀರಾಚಾರಿ ಸ್ವಾಮಿಜೀ, ಕೋಸ್ಗಿ ಸ್ವಾಮಿಜೀ, ಭರತ್ ಸ್ವಾಮಿಜೀಯವರು ಸ್ಥಳೀಯ ಭಕ್ತರ ಜೊತೆಗೆ ಅಮ್ಮನವರ ದರ್ಶನ ಪಡೆದು ಶಿವಯ್ಯ ಸ್ವಾಮಿಯವರನ್ನು ಭೇಟಿಯಾಗಲು ಅವರ ಮಗನಾದ ಸುಮನ್ ಗೆ ತಿಳಿಸಿದರು, ಸ್ವಾಮಿಜೀಯವರು ಮಲಗಿದ್ದಾರೆ ಎಂದು ಹೇಳಿ ಒಳಗೆ ಹೋದ ಸುಮನ್ ಹೊರಗೆ ಬರಲೇ ಇಲ್ಲ, ಬಾಗಿಲು ಕೂಡಾ ತೆಗೆಯಲಿಲ್ಲ ಸುಮಾರು ಗಂಟೆಗೆ ಹೆಚ್ಚು ಕಾಲ ನಿರೀಕ್ಷಿಸಿದ ಭಕ್ತರು ಸ್ವಾಮಿಜೀಯವರಿಗೆ ತುಂಬಾ ಬೇಜಾರಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಮಿಜೀಯವರು ಬಹಳ ಮನ ನೊಂದುಕೊಂಡರು ಆಶ್ರಮಕ್ಕೆ ಬಂದ ಭಕ್ತರ ಬಗ್ಗೆ ಶಿವಯ್ಯ ಸ್ವಾಮಿ ನಡೆದುಕೊಂಡದ್ದು ಸರಿಯಲ್ಲ ಆಶ್ರಮ ಧರ್ಮದಲ್ಲಾ ಎಂದರು.
ಬೇಟಿಯಾಗಳು ಬಂದಂತಹ ಭಕ್ತರ ಜೊತೆ ನಡೆದುಕೊಂಡಿದ್ದು ಸಂಸ್ಕಾರವಲ್ಲ ಎಂದು ಭಕ್ತರು ಟೀಕಿಸಿದರು.
ಸ್ವಾಮಿಜೀಯವರ ಜೊತೆಗೆ ಪರ್ವತ ರೆಡ್ಡಿ ಕೋಡ್ಲಾ, ಬಂಡಿ ಶಿವರಾಮ್ ರೆಡ್ಡಿ, ಮಂಗಳಾರಂ ಯಾದಯ್ಯ, ಶ್ರೀನಿವಾಸ್ ಸಿಕಿಂದರಾಬಾದ್, ರಘುವೀರ್ ಸಿಂಗ್, ಪ್ರಕಾಶ್ ರೆಡ್ಡಿ ಯಾನಾಗುಂದಿ, ಮಲ್ಲಿಕಾರ್ಜುನ ಸ್ವಾಮಿ, ಗೋಪಾಲ್, ಆಂಜನೇಯ, ಮಹಾದೇವ್, ಶಿವರಾಂ, ಗೋಪಾಲ್ ಗಿರೀಶ್ ಮತ್ತು ಸುತ್ತಮುತ್ತಲಿನ ಭಕ್ತರು ಉಪಸ್ಥಿತಿಯಲ್ಲಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




