ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಪ್ರೀಮಿಯಂ ಬಸ್ ಟಿಕೆಟ್ ದರ ಶೇಕಡ 15 ರವರೆಗೆ ಕಡಿತಗೊಳಿಸಲಾಗಿದೆ.
ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಯ್ದ ಮಾರ್ಗಗಳ ಪ್ರೀಮಿಯಂ ಬಸ್ ಸೇವೆಗಳ ಪ್ರಯಾಣ ದರದಲ್ಲಿ ಕಡಿತಗೊಳಿಸಿ ಕೆಎಸ್ಆರ್ಟಿಸಿ ಆದೇಶಿಸಿದೆ.
ಕುಂದಾಪುರ, ಉಡುಪಿ, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಸಾಗರ, ಹೈದರಾಬಾದ್, ಚೆನ್ನೈ, ಸಿಕಂದರಾಬಾದ್, ಮಂತ್ರಾಲಯ, ತಿರುಪತಿ, ಪುಣೆ, ಮುಂಬೈ, ವಿಜಯವಾಡ, ಎರ್ನಾಕುಲಂ, ತ್ರಿಶೂರ್ ಸೇರಿದಂತೆ ಇತರ ಕಡೆಗೆ ಬೆಂಗಳೂರಿನಿಂದ ತೆರಳುವ ಬಸ್ ಗಳ ಟಿಕೆಟ್ ದರ ಕಡಿತಗೊಳಿಸಲಾಗಿದೆ.
ರಾಜಹಂಸ, ಹವಾ ನಿಯಂತ್ರಿತ ಸಹಿತ, ರಹಿತ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಬಸ್ ಗಳ ಪ್ರಯಾಣ ದರದಲ್ಲಿ ಶೇ. 5ರಿಂದ 15ರಷ್ಟು ಟಿಕೆಟ್ ದರ ಕಡಿಗೊಳಿಸಲಾಗಿದೆ. ವಿವರಗಳಿಗೆ ಕೆಎಸ್ಆರ್ ಟಿಸಿ ವೆಬ್ ಸೈಟ್ ಗೆ ಭೇಟಿ ನೀಡಬಹುದು.




