ಶ್ರೀ ಉರಿಗದ್ದಿಗೇಶ್ವರ ಕ್ಷೇತ್ರದ ಮಠದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಕೈಗಾರಿಕಾ ಉದ್ಯಮಿ ಆರ್ ಕುಮಾರ್ ಗೆ ಶ್ರೀ ಗುರು ರಕ್ಷೆ ಪ್ರಶಸ್ತಿ ಪ್ರದಾನ
ಬೆಂಗಳೂರು : ಸರಳ ಸಜ್ಜನಿಕೆ ವ್ಯಕ್ತಿತ್ವದ ಹೊಂದಿದ ಏಕೈಕ ವ್ಯಕ್ತಿ ಆರ್ ಕುಮಾರ್ ಅವರಿಗೆ “ಶ್ರೀ ಗುರು ರಕ್ಷೆ ಪ್ರಶಸ್ತಿ”ಯನ್ನು
ಶ್ರೀ ಉರಿಗದ್ದಿಗೇಶ್ವರ ಕ್ಷೇತ್ರ ಶ್ರೀ ಬೆಟ್ಟಳ್ಳಿ ಮಠದ ವತಿಯಿಂದ ಹಳೆ ವಿದ್ಯಾರ್ಥಿಗಳ ಮತ್ತು ಹಿತೈಷಿಗಳ ವಾರ್ಷಿಕ ಸಮಾವೇಶ ಆಯೋಜಿಸಲಾಗಿತ್ತು.

ಸಮಾಜ ಸೇವೆಕ, ಕೈಗಾರಿಕಾ ಉದ್ಯಮಿ ಹಾಗೂ ಜೆಡಿಎಸ್ ಮಾಜಿ ಅಧ್ಯಕ್ಷ ಆರ್ ಕುಮಾರ್ ಅವರನ್ನು ಗುರುತಿಸಿ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕುಣಿಗಲ್ ಶಾಸಕ ಡಾ. ರಂಗನಾಥ್, ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ಆರ್ ಕುಮಾರ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ “ಶ್ರೀಗುರು ರಕ್ಷೆ ಪ್ರಶಸ್ತಿ” ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೀಣ್ಯ ದಾಸರಹಳ್ಳಿ ಸಂಘದ ಡಿ.ಪಿ ಅಧ್ಯಕ್ಷ ದಾನಪ್ಪ, ಸುರೇಶ್, ಗಂಗಶಾನಯ್ಯ, ರಾಜಣ್ಣ, ರಂಗಸ್ವಾಮಿ, ಬಸವರಾಜು, ರಾಮಕೃಷ್ಣಯ್ಯ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




