Ad imageAd image

ದೇವರಿಗೆ ಸಮರ್ಪಿಸುವ ಭಕ್ತಿ ನಿಸ್ವಾರ್ಥವಾಗಿರಬೇಕು :  ಪರಮಪೂಜ್ಯ ಶಿವಪ್ರಸಾದ ದೇವರ ನುಡಿ

Bharath Vaibhav
ದೇವರಿಗೆ ಸಮರ್ಪಿಸುವ ಭಕ್ತಿ ನಿಸ್ವಾರ್ಥವಾಗಿರಬೇಕು :  ಪರಮಪೂಜ್ಯ ಶಿವಪ್ರಸಾದ ದೇವರ ನುಡಿ
WhatsApp Group Join Now
Telegram Group Join Now

ನಿಪ್ಪಾಣಿ  : ಭಕ್ತರು ದೇವರಿಗೆ ಭಕ್ತಿ ಸಮರ್ಪಿಸುವಾಗ ನಿಸ್ಕಾಮ್ಯ ಹಾಗೂ ನಿಸ್ವಾರ್ಥವಾಗಿರಬೇಕು. ಸಮಾಜಕ್ಕನುಗುಣವಾಗಿ ಪ್ರಾರ್ಥನೆ ಮಾಡಿದರೂ ಪ್ರಾರ್ಥನೆಯಲ್ಲಿ ಬಳಸುವ ಶಬ್ದಗಳು, ಮಂತ್ರಗಳು, ಪದಬಳಕೆ, ಆಚಾರ ವಿಚಾರಗಳು, ವಿಭಿನ್ನವಾಗಿರಬಹುದು ಆದರೆ ಭಕ್ತಿ ಸಮರ್ಪಿಸುವ ಮಾರ್ಗ ಒಂದೇ ಅದು ವಿಶ್ವರೂಪಿ ಪರಮಾತ್ಮನಿಗೆ ಅರ್ಪಿತ ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ಪರಮಪೂಜ್ಯ ಶಿವಪ್ರಸಾದ ದೇವರು ನುಡಿದರು. ಲಿಂಗೈಕ್ಯ ಅಲ್ಲಮಪ್ರಭು ಸ್ವಾಮಿಗಳ ಸಂಕಲ್ಪವಾದ ಚಿಂಚಣಿ ಗ್ರಾಮದಲ್ಲಿ 500 ಬಡ ಮಕ್ಕಳಿಗೆ ಉಚಿತ ವಸತಿ ಶಾಲೆ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಅಲ್ಲಮನ ನಡೇ ಹಳ್ಳಿಗಳ ಕಡೆ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಭಕ್ತರಿಗೆ ಪ್ರವಚನದ ಪ್ರಸಾದ ನೀಡಿದರು.

ಶ್ರೀಗಳ ಜೊತೆಗೆ ಕೊಡೇಕಲನ್ ಸುಭಾಷ್ ಹೂಗಾರ್ ಅವರ ತಬಲಾ ವಾದನ,ಹಾಗೂ ತಾಳಿಕೋಟೆಯ ಪರಶುರಾಮ ಚಟ್ನಳ್ಳಿ ಅವರ ಸಂಗೀತ ಸಾಥ ತುಂಬಿದ ಭಕ್ತರಿಗೆ ಪರಾಮರ್ಶಗೊಳಿಸಿತು.ಶಮನೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ಜನವರಿ 4 ರಿಂದ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಮಂಗಳವಾರ ಎರಡು ಸಾವಿರಕ್ಕೂ ಅಧಿಕ ಸದ್ಭಕ್ತರು ಪ್ರವಚನದ ಲಾಭ ಪಡೆದರು.

ಇದೇ ಸಂದರ್ಭದಲ್ಲಿ ಪ್ರವಚನದ ನಂತರ ಅನ್ನದಾಸೋಹದ ದಾನಿಗಳಿಗೆ ಹಾಗೂ ಪ್ರವಚನಕ್ಕೂ ಮುಂಚೆ ವಚನ ಗಾಯನ ಭಕ್ತಿಗೀತೆಗಳನ್ನು ಹಾಡಿದ ವಿದ್ಯಾರ್ಥಿನಿಯರಿಗೆ ಶ್ರೀಗಳಿಂದ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಪ್ರವಚನ ಕಾರ್ಯಕ್ರಮದಲ್ಲಿ ಹಾಲ ಶುಗರ ಕಾರ್ಖಾನೆ ಸಂಚಾಲಕ ಜಯಕುಮಾರ ಖೋತ, ಸುದರ್ಶನ್ ಖೋತ ಅಣ್ಣಾಸಾಹೇಬ ತಾರದಾಳೆ ಚಂದ್ರಕಾಂತ ಮುನ್ನೊಳೆ, ದೀಪಕ ಖೋತ ಭರತ ಖೋತ ತಾತ್ಯಾಸಾಹೇಬ ಖೋತ ಸೇರಿದಂತೆ ಬೇಡಕಿಹಾಳ, ನೇಜ ಶಮನೇವಾಡಿ ಗ್ರಾಮದ ಎರಡು ಸಾವಿರಕ್ಕೂ ಅಧಿಕ ಭಕ್ತರು ಉಪಸ್ಥಿತರಿದ್ದರು. ಕೊನೆಗೆ ಅಲ್ಲಮಪ್ರಭು ಮಠದ ಗೀತೆಯೊಂದಿಗೆ ಪ್ರವಚನ ಮುಕ್ತಾಯಗೊಂಡಿತು.

ವರದಿ  : ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!