Ad imageAd image

ಎಂಎಲ್‌ಸಿ ಬಸನಗೌಡ ಬಾದರ್ಲಿ ಶಾಸಕರ ಮೇಲೆ ಗಂಭೀರ ಆರೋಪ!

Bharath Vaibhav
WhatsApp Group Join Now
Telegram Group Join Now

ಸಿಂಧನೂರು : ಸೋಮವಾರ ಬಸನಗೌಡ ಬಾದರ್ಲಿ ಯವರು ತಮ್ಮ ಜನಸ್ಪಂದನ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ೧೪ ಬಸ್ ಗಳನ್ನು ಬಿಡುಗಡೆಗೊಳಿಸಿರುವುದು ಅತ್ಯಂತ ಸ್ವಾಗತಾರ್ಹ, ಆದರೆ ಶಾಸಕ ಹಂಪನಗೌಡ ಬಾದರ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದು, ಇದು ಅವರ ಹಿರಿತನಕ್ಕೆ ಶೋಭೆಯಲ್ಲ, ನೀವು ಯಾವ ರೀತಿ ಶಾಸಕರೋ ನಾನು ಕೂಡ ಶಾಸಕನೆ,೫ ಬಾರಿ ಶಾಸಕನಾದರೂ ಕ್ಷೇತ್ರದಲ್ಲಿ ನಿವೇನು ಅಭಿವೃದ್ಧಿ ಕೆಲಸ ಮಾಡಿದ್ದೀರಿ ? ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಗೊಂಡ ನಂತರ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಸಮಗ್ರವಾಗಿ ಮಾತನಾಡಿದ್ದೇನೆ ಅದು ರೈತ, ಕಾರ್ಮಿಕ, ವಿದ್ಯಾರ್ಥಿ, ಯುವ ಜನತೆ ಒಳಗೊಂಡಂತೆ ಸರ್ವರ ಅನುಕೂಲಕ್ಕಾಗಿ ಅನೇಕ ಕೆಲಸಗಳನ್ನು ಮಂಜೂರು ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.

ಆದರೆ ಶಾಸಕ ಹಂಪನಗೌಡ ಬಾದರ್ಲಿಯವರು ಅಧಿಕಾರಿಗಳನ್ನು ಎದುರಿಸಿ, ಬೆದರಿಸಿ, ತಮ್ಮ ಹಿಡಿತದಲ್ಲಿ ಇಟ್ಟುಕೊಂಡು, ಕ್ಷೇತ್ರದಲ್ಲಿ ಇಸ್ಪೀಟು ಮಟಕಾ, ಡ್ರಗ್ಸ್, ಭ್ರಷ್ಟಾಚಾರ, ಅಕ್ರಮ ಚಟುವಟಿಕೆ, ಸೇರಿದಂತೆ ಇತರೆ ಕೃತ್ಯಗಳಿಗೆ ಪೋಷಿಸಿ ಬೆಳಸುತ್ತಿದ್ದಾರೆ
ಅಡ್ಜಸ್ಟಮೆಂಟ್ ರಾಜಕಾರಣ ಪಕ್ಷವನ್ನು ಮೂಲೆಗುಂಪು ಮಾಡುತ್ತಿರುವ ಬಗ್ಗೆ ಈಗಾಗಲೇ ನಾನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ೫ ಬಾರಿ ಗೆದ್ದ ಶಾಸಕರು ಯಾವ ಒಂದು ಸಮಾಜಕ್ಕಾದರೂ ಒಳ್ಳೇದು ಮಾಡಿದ್ದಾರಾ ?.ನಾನು ಅಧಿಕಾರವಿರಲಿ ಬಿಡಲಿ ಕ್ಷೇತ್ರದ ಜನರ ಒಳಿತಿಗಾಗಿ ಪಕ್ಷದ ಬೆಳವಣೆಗಾಗಿ ಸದಾ ಹೋರಾಡುವುದು ಖಚಿತ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಪರಿಣಾಮ ಹೈಕಮಾಂಡ್ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿದೆ.

ಆದರೆ ಒಬ್ಬ ರೈತನ ಮಗ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತಿರುವುದು ಕಂಡು ಶಾಸಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಒಂದು ವೇಳೆ ನನ್ನ ಕಾರ್ಯಕರ್ತರ ಮೇಲೆ ಏನಾದರೂ ಆದರೆ ಅದಕ್ಕೆ ನೇರ ಶಾಸಕ ಹಂಪನಗೌಡ ಬಾದರ್ಲಿಯವರೆ ಹೊಣೆ, ಇದಕ್ಕೆ ಶಾಸಕ ಹಂಪನಗೌಡ ಬಾದರ್ಲಿಯವರೆ ನೇರವಾಗಿ ಉತ್ತರಿಸಬೇಕು ಪ್ರೋಟೋ ಕಾಲ್ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.

ವರದಿ  : ಬಸವರಾಜ ಬುಕ್ಕನಹಟ್ಟಿ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!