ಬೆಂಗಳೂರು : ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಸರಳ ಸಜ್ಜನಿಕೆ ವ್ಯಕ್ತಿತ್ವದ ಹೊಂದಿದ ಅದಲ್ಲದೆ ಕೊಡಗೈ ದಾನಿ ಹೆಸರುವಾಸಿಯಾಗಿದ ಮಲ್ಕಪ್ಪ ಮೇಲ್ಕೇರಿ ಸಾಹುಕಾರ ಅವರ “65ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮಲ್ಲಪ್ಪ ಅವರ ಧರ್ಮಪತ್ನಿ, ಮಾಜಿ ತಾಲೂಕ ಪಂಚಾಯತಿ ಸದಸ್ಯ ಹಾಗೂ ಹಿರಿಯ ರಾಜಕಾರಣಿ ಶ್ರೀಮತಿ ರತ್ನಮ್ಮ ಮೆಲ್ಕೇರಿ , ಮೊಮ್ಮಗ ಮಲ್ಲಿಕಾರ್ಜುನ. ಬಿ. ಮೇಲಕೇರಿ ಅವರ ನೇತೃತ್ವದಲ್ಲಿ ತಮ್ಮ ಸ್ವಗ್ರಹದಲ್ಲಿ ಆಯೋಜಿಸಲಾಗಿತ್ತು.
ದಿವಂಗತ ಮಲ್ಕಪ್ಪ ಸಾಹುಕಾರ ಅವರ ಭಾವಚಿತ್ರಕ್ಕೆ ವಿವಿಧ ಹೂವುಗಳಿಂದ ಅಲಂಕಾರಿಸಿ ವಿಭೂತಿ ಗಂಧ ಕುಂಕುಮ ಅರಿಷಿಣ ತುಪ್ಪದ ದೀಪ ಕಾಯಿ ಕರ್ಪುರದೊಂದಿಗೆ ಮಹಾಮಂಗಳಾರತಿ ಜರುಗಿದವು.’ದಿವಂಗತ ಮಲ್ಕಪ್ಪ ಸಾಹುಕಾರ’
ಭಾವಚಿತ್ರಕ್ಕೆ ಸಾರ್ವಜನಿಕರಿಗೆ , ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ ನಮನ ಗೌರವ ನಮನ ಸಲ್ಲಿಸಿದರು.
ಮಲ್ಲಿಕಾರ್ಜುನ. ಬಿ. ಮೇಲಕೇರಿ ಅವರು ಸರ್ವರಿಗೂ ಸ್ವಾಗತಿಸಿದರು.
ಮಲ್ಲಿಕಾರ್ಜುನ್ ಬಿ. ಮೇಲಕೆರಿ ಅವರ ಕುಟುಂಬ ಸದಸ್ಯರು ಸೇರಿ 201 ಸ್ವಾಮಿಗಳಿಗೆ( ಜಂಗಮರಿಗೆ) ಪಾದಪೂಜೆ ನೆರವೇರಿಸಿ ಆಶಿರ್ವಾದ ಪಡೆದು ಶ್ರೀಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರೀತಿ ಭೋಜನ, ಪ್ರಸಾದ ನಿಯೋಗಕ್ಕೆ ಚಾಲನೆ ನೀಡಿದರು.
ಗ್ರಾಮ ಹಿರಿಯ ಕಲಾವಿದ ಹಾಗೂ ಖ್ಯಾತ ಗಾಯಕ ಮತ್ತು ಹಾರ್ಮೋನಿಯಂ ಪರಿಣಿತರಾದ ಬೀರಣ್ಣ ಎ.ಪೂಜಾರಿ ಅವರು
ದಿವಂಗತ ಮಲ್ಕಪ್ಪ ಸಾಹುಕಾರ್ ಅವರು ಮಾಡಿದ ಸಮಾಜಮುಖಿ ಅಭಿವೃದ್ಧಿಗಳ ಕುರಿತು ಹಾಡಿ ಹೊಗಳಿದ ಹಿರಿಯ ಮುಖಂಡ ಬೀರಣ್ಣ ಪೂಜಾರಿ.
ಮಾರ್ಗದರ್ಶದಲ್ಲಿ ವಿವಿಧ ಕಲಾವಿದರಿಂದ ಭಜನೆ ಸಂಗೀತ ಮನೋರಂಜನೆ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ಜರುಗಿದವು.
ಈ ಸಂದರ್ಭದಲ್ಲಿ ಫಕೀರಯ್ಯ ಸ್ವಾಮಿ ಸ್ಥಾವರಮಠ. ರೇವಣಸಿದ್ಧಯ್ಯ ಕುಡಿಕಿ, ವಿಶ್ವನಾಥ ಬಾಳದೆ, ಶಾಂತಕುಮಾರ್ ಪಾಟೀಲ್, ಶ್ರೀಶೈಲ ಕೊಳ್ಳಿ, ಮಲ್ಲಿಕಾರ್ಜುನ ಮಾಡಬುಳ, ಶಂಕರ ಮೇಲಕೇರಿ, ಶರಣಬಸಪ್ಪ ಜೇವೂರಶೆಟ್ಟಿ, ಶಿವಶರಣಪ್ಪ ಕೇಶ್ವಾರ್, ಧರ್ಮಣ್ಣ ಡೋಣ್ಣೂರ್, ಮನೋಹರ್ ವಿಶ್ವಕರ್ಮ,ಬಸಲಿಂಗ ಕಂಟಿಕಾರ್, ಶ್ರೀಶೈಲ್ ತಮ್ಮಣಗೌಡ, ಅಂಬಿಗಾರ ಚೌಡಯ್ಯ ಮಹಿಳಾ ಮಂಡಳಿ, ಭೀಮೇಶ್ವರ್ ,ಬೀರೇಶ್ವರ್ ಮರುತೇಶ್ವರ್ ವೀರಭದ್ರೇಶ್ವರ್ ಸಮಸ್ಥ ಭಜನಾ ಮಂಡಳಿಯರಿಂದ ಬೆಳಗಿನ ಜಾವದ ವರೆಗೆ ಭಜನೆ ಮಹಾ ಮಂಗಳಾರತಿ ಯೊಂದಿಗೆ ಮುಕ್ತಾಯಗೊಂಡಿತ್ತು ನಂತರ ನೂರಾರು ಜನ ಕಲಾವಿದರಿಗೆ ಶಾಲು ಹೊದಿಸಿ ಫಲಪುಷ್ಪ ಗಳೊಂದಿಗೆ ಗೌರವಿಸಲಾಯಿತು ಎಂದು ಗ್ರಾಮದ ಮುಖಂಡ ಹಾಗೂ ರಾಜಕಾರಣಿ ಫಕೀರಯ್ಯ ಸ್ವಾಮಿ ಸ್ಥಾವರಮಠ್ ಅವರು ಅಯ್ಯಣ್ಣ ಮಾಸ್ಟರ್ ಬೆಂಗಳೂರು ಜೊತೆಗೆ ಮಾತನಾಡಿ ಬಿ .ವಿ ನ್ಯೂಸ್ -5 ವಾಹಿನಿಗೆ ತಿಳಿಸಿದ್ದಾರೆ.
ವರದಿ : ಅಯ್ಯಣ್ಣ ಮಾಸ್ಟರ್




