Ad imageAd image

ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

Bharath Vaibhav
ರಸ್ತೆ ಸುರಕ್ಷತಾ ಜಾಗೃತಿ  ಕಾರ್ಯಕ್ರಮ
WhatsApp Group Join Now
Telegram Group Join Now

ಆಲಮಟ್ಟಿ : ವಿಜಯಪುರ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಆಲಮಟ್ಟಿ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ.

ವಿಜಯಪುರ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಆಲಮಟ್ಟಿ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ -2026 ಅಭಿಯಾನ ಕಾರ್ಯಕ್ರಮ ಜರುಗಿತು.

ಆಲಮಟ್ಟಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆಲಮಟ್ಟಿ ಸ್ಟೇಷನ್, ಡ್ಯಾಮ್ ಸರ್ಕಲ್ಮೊ, ಮೊಗಲ್ ಗಾರ್ಡನ್, ರಾಕ್ ಗಾರ್ಡನ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಮೂರ್ತಿಯ ಹತ್ತಿರ ಸಾರ್ವಜನಿಕರಿಗೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಬೇಕು ತಿಳುವಳಿಕೆಯನ್ನು ಮೂಡಿಸಿದರು. ಹೆಲ್ಮೆಟ್ ಧರಿಸಿದ ಸವಾರರಿಗೆ ಗುಲಾಬಿ ಹೂವನ್ನು ಕೊಟ್ಟು ಅಭಿನಂದಿಸಿದರು.
ಕಾರ್ಯಕ್ರಮದ ಉಸ್ತವಾರಿಯನ್ನು ಪಿಎಸ್ಐ, ಎಫ್.ಎಸ್. ಇಂಡಿಕಾರ್, ಮಾತನಾಡಿ ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸಬೇಕು, ಸರ್ವಜನಕರಿಗೆ ಹಾಗೂ ಪ್ರವಾಸಿಗರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವಾಗ ರಸ್ತೆ ಸುರಕ್ಷತೆಯ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳುವಳಿಕೆ ಮೂಡಿಸಿದರು.

ಸಿಬ್ಬಂದಿ ವರ್ಗದವರಾದ ಬಸವರಾಜ್ ನಾಗರಾಳ, ಹಾಗೂ ಗಿರೀಶ್ ಚಲವಾದಿ ಹಾಜರಿದ್ದು ಸಾರ್ವಜನಿಕರಿಗೆ ಸೂಕ್ತ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅರಿವು ಮೂಡಿಸಿದರು.

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!