ಸೇಡಂ : ತಾಲೂಕಿನ ಮೆದಕ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಕಿಯಲ್ಲಿ ಹುಳು ಮತ್ತು ಕಲ್ಲುಗಳು ಕಂಡುಬಂದಿರುವ ಸುದ್ದಿ ನಮ್ಮ ಭಾರತ ವೈಭವ ನ್ಯೂಸ್ ನಲ್ಲಿ ವರದಿಯಾಗಿತ್ತು ವರದಿಗೆ ಸ್ಪಂದಿಸಿ ಮಂಗಳವಾರ ದಿನಾಂಕ/೬/೦೧/೨೦೨೬ರಂದು ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ಮತ್ತು ಎಡಿ ಅವರು ಬೇಟಿ ನೀಡಿ ಆಹಾರ ಧಾನ್ಯಗಳನ್ನು ಪರಿಶೀಲನೆ ನಡೆಸಿ ಮಕ್ಕಳ ಜೊತೆಗೆ ಮದ್ಯಾಹ್ನದ ಊಟ ಸವಿದರು.
ಹಳೆಯ ರೇಷನ್ ಅಕ್ಕಿಯನ್ನು ವಾಪಸ್ ಪಡೆದು ಹೊಸ ರೇಷನ್ ಅಕ್ಕಿಯನ್ನು ನೀಡಿದರು.
ತದನಂತರ ಮಾತನಾಡಿದ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ಅವರು ಸದ್ಯಕ್ಕೆ ಮೂರು ಜನ ಅಡಿಗೆ ಸಿಬ್ಬಂದಿ ಇದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಇನ್ನೊಬ್ಬ ಅಡಿಗೆ ಸಹಾಯಕಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ಸ್ವೀಕರಣೆ ಮಾಡುವಂತೆ ಶಾಲೆಯ ಮುಖ್ಯ ಗುರುಗಳಾದ ಸಂತೋಷ ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಅವರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ, ಶಾಲೆಯ ಮುಖ್ಯ ಗುರುಗಳಾದ ಸಂತೋಷ, ಎಡಿ ಉಮಾಪತಿ, ಶರಣು ನಾಯ್ಕಿನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ, ಸಾಬಪ್ಪ ಅಬ್ಬಗಳ,ಮತ್ತು ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಮತ್ತು ಎಸ್ಡಿಎಂಸಿ ಸರ್ವಸದಸ್ಯರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




