Ad imageAd image

ಜ 12ರಂದು ಐಪಿಎಲ್ ಸೀಸನ್ ಮುಕ್ತಾಯ ಬಹುಮಾನ ವಿತರಣೆ ಸಮಾರಂಭ

Bharath Vaibhav
ಜ 12ರಂದು ಐಪಿಎಲ್ ಸೀಸನ್ ಮುಕ್ತಾಯ ಬಹುಮಾನ ವಿತರಣೆ ಸಮಾರಂಭ
WhatsApp Group Join Now
Telegram Group Join Now

ಇಳಕಲ್ : ಕಳೆದ 32 ದಿನಗಳಿಂದಲೂ ನಗರದ ಆರ್. ವೀರಮಣಿ ಕ್ರೀಡಾಂಗಣದಲ್ಲಿ ಹುನಗುಂದ ಸ್ಪೋರ್ಟ್ಸ್ ಮತ್ತು ಕಲ್ಚರ್ ಅಸೋಸಿಯೇಷನ್, ಇಳಕಲ್ ರಾಜ್ಯ ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಇಳಕಲ್ ಪ್ರೀಮಿಯರ್ ಲೀಗ್ 2025 ಐಪಿಎಲ್ ಸೀಜನ್-8 ಮುಕ್ತಾಯ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯ ಕ್ರಮವು ಜ 12 ಸೋಮವಾರರಂದು ಜರುಗಲಿದೆ ಎಂದು ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಅಸೋಸಿಯೇಷನ್‌ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ ಹೇಳಿದರು.

ಆ‌ರ್. ವೀರಮಣಿ ಮೈದಾನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡುತ್ತಾ ಯುವಕರಲ್ಲಿ ಕ್ರೀಡಾಶಕ್ತಿಯನ್ನು ಬೆಳೆಸುವ ಉದ್ದೇಶದಿಂದ ಈ ಕ್ರಿಕೆಟ್ ಆಟವನ್ನು ಆಡಿಸಲಾಗುತ್ತಿದೆ ಪಕ್ಷಾತೀತವಾಗಿ ಆ ಪಕ್ಷ ಈ ಪಕ್ಷ ಭೇದಭಾವ ಇಲ್ಲದೆ ಎಲ್ಲ ತಂಡಗಳಲ್ಲಿ ಎಂಟು ಗ್ರಾಮೀಣ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತಾ ಮುಕ್ತಾಯ ಸಮಾರಂಭದ ಮುನ್ನ ಜ. 11 ರವಿವಾರ 19 ವರ್ಷದ ಒಳಗಿನ ಬೆಂಗಳೂರು ಮತ್ತು ಮೈಸೂರು ಮಹಿಳಾ ಕ್ರಿಕೆಟ್ ತಂಡದವರಿಂದ ಟಿ ಟ್ವೆಂಟಿ ಪಂದ್ಯ ಪ್ರದರ್ಶನ ಇದೆ ಎಲ್ಲರೂ ಬನ್ನಿ ಎಂದು ಕರೆ ನೀಡಿದರು ಮತ್ತು ನೋಡುಲು ಬರುವ ಪ್ರೇಕ್ಷಕರಿಗೆ ಶುದ್ಧ ಕುಡಿಯುವ ನೀರು, ಕುರ್ಚಿ ಪೆಂಡಾಲ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷ ಆಟಗಾರರು ಕ್ರೀಡಾಪಟುಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಶಾಸಕ ಕಾಶಪ್ಪನವರ ಪತ್ರಿಕಾಗೋಷ್ಠಿ ಮೂಲಕ ವಿನಂತಿಸಿ ಕೊಂಡರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!