ಕಲಘಟಗಿ : ಗಂಜಿಗಟ್ಟಿ.ಲಂಚ ಪಡೆದರಾ ಪಿಡಿಒ..? ಗ್ರಾಮೀಣ ಭಾಗದಲ್ಲಿ ಪಂಚಾಯತಿ ಸಿಬ್ಬಂದಿ ಲಂಚಾವತಾರ …?? ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜೀಗಟ್ಟಿ ಗ್ರಾಮ ಪಂಚಾಯಿತಿಯ ಈ ಹಿಂದಿನ ಪಿಡಿಓ ಫೋನ್ ಪೇ ಮೂಲಕ ಲಂಚ ಪಡೆದಿದ್ದಾರೆ.ಖಾತೆ ಬದಲಾವಣೆ ಮಾಡಲು ಫೋನ್ ಪೇ ಮೂಲಕ ಲಂಚ ಸ್ವೀಕಾರ ಮಾಡಿದ ಹಿಂದಿನ ಪಿಡಿಓ ಚಂದ್ರು ದೊಡ್ಡೋರು. ಬಸವರಾಜ ಗಾಣಿಗೇರ ಎಂಬುವರಿಂದ ಖಾತೆ ಬದಲಾವಣೆ ಮಾಡಿಕೊಡುತ್ತೇನೆ ಎಂದು ಹಾಗೂ ಈ ಸ್ವತ್ತನ್ನು ಪೂರೈಸುತ್ತೇನೆ ಎಂದು ಹೇಳಿ 5,000 ಗಳನ್ನ ಫೋನ್ ಪೇ ಮಾಡಿಸಿಕೊಂಡು ಎರಡು ತಿಂಗಳಿನಿಂದ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಕೊಳ್ಳುತ್ತಾ, ನೇರ ಆರೋಪ ಚಂದ್ರು ದೊಡ್ಡೋರು ಈ ಪಿಡಿಒ ಗಂಜೀಗಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಅನ್ಯಾಯ ಅಕ್ರಮಗಳನ್ನು ಮಾಡಿದ್ದಾರೆ.
ಇದನ್ನು ಗ್ರಾಮಸ್ಥರು ನಮ್ಮ ವರದಿಗಾರರ ಮುಂದೆ ತಮ್ಮ ಅಳಲನ್ನು ಇದೇ ಸಂದರ್ಭದಲ್ಲಿತೋಡಿಕೊಂಡರು . ಇದೇ ವಿಷಯದಾಂಗವಾಗಿ ತಾಲೂಕ್ ಪಂಚಾಯತಿಯ ಅಧಿಕಾರಿಯಾದ ಸಾವಂತ್ ಅವರಿಗೆ ಕರೆ ಮಾಡಿದರೆ ಮಾಧ್ಯಮದವರ ಕರೆಯನ್ನು ಸಿಕ್ಕರಿಸುವುದಿಲ್ಲ . ಇವರಿಗೆ ನೇರವಾಗಿ ಭೇಟಿಯಾಗಿ ವಿಷಯ ತಿಳಿಸಿದರೆ ಉಡಾಫೆ ಆಗಿ ಉತ್ತರಿಸುತ್ತಾರೆ. ಗಮನಕ್ಕೆ ಬಂದ ನಂತರ ಪಿಡಿಒಗಳಿಗೆ ಕರೆ ಮಾಡಿ ವಿಷಯ ತಿಳಿದುಕೊಳ್ಳುವುದು ಬಿಟ್ಟು ಎಲ್ಲಾ ಪುರಾವೆಗಳನ್ನು ಇವರಿದ್ದಲ್ಲಿಗೆ ತೆಗೆದುಕೊಂಡು ಬರಲು ಹೇಳುತ್ತಾರೆ. ಮಾನ್ಯ ಸಚಿವರು ಹಾಗೂ ಸಿಇಓ ಇದರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಾಗಿದೆ.
ವರದಿ : ಗುರುರಾಜ ಹಂಚಾಟೆ




