ಐನಾಪುರ : ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹಾಗು ಕೇಂದ್ರ ಶಿಕ್ಷಣ ಸಚಿವರು ಹಾಗೂ ಹಿಂದಿನ ಸಂಸದರಾದ ಅಣ್ಣಾಸಾಬ ಜೊಲ್ಲೆಯವರ ಸಹಕಾರದೊಂದಿಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಅಥಣಿ ತಾಲೂಕಿನ ಶಿನಾಳ ಗ್ರಾಮಕ್ಕೆ ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡಿದ ಕಿರ್ತಿ ಲಕ್ಷ್ಮಣ ಸವದಿವರಿಗೆ ಸಲ್ಲುತ್ತದೆ ಎಂದು ಯುವನಾಯಕ ಚಿದಾನಂದ ಸವದಿ ಹೇಳಿದರು.
ಅವರು ಶುಕ್ರವಾರ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಸಂಸ್ಥೆ ಆಯೋಜಿಸಿದ ಪದ್ಮಾವತಿ ಸೆಂಟ್ರಲ್ ಸ್ಕೂಲ(ಸಿಬಿಎಸ್) ಶಾಲೆಯ ವಾರ್ಷಿಕ ಸ್ನೇಹಸಮ್ಮೇಳನ ಸಮಾರಂಭವನ್ನು ಸರಸ್ವತಿ ಹಾಗೂ ಪದ್ಮಾವತಿ ಭಾವಚಿತ್ರ ಪೂಜೆ ಹಾಗೂ ದ್ವೀಪ ಪ್ರಜ್ವಲಿಸುವರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ವಿಶೇಷ ಪ್ರಯತ್ನ ಮಾಡಿ ಶಾಲೆಯನ್ನು ಮಂಜೂರು ಮಾಡಿಸಿದಾರೆ ಎಂದ ಅವರು ಗಡಿ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ನಮ್ಮ ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಹೆಚ್ಚಿಸಲಿ ಎಂದು ಹೇಳಿದರು.
ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡುತ್ತಾ ಮಕ್ಕಳಿಗೆ ವಿದ್ಯೆ ” ನೀಡಿದರೆ ಸಾಲದು,ಉತ್ತಮ ಸಂಸ್ಕಾರ ” ನೀಡಿದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು ಹಲವಾರು ವ್ಯಕ್ತಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದರೂ ಸಹಿತ ತಂದೆ,ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಎಂದು ಕಳವಳ ವ್ಯಕ್ತಪಡಿಸಿದ್ದರು.
ಸಂಸ್ಥೆ ಅಧ್ಯಕ್ಷ ಸಂಜಯ ಕುಚನೂರೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಚಿಕ್ಕಮಕ್ಕಳಿಂದ ನೃತ್ಯ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮ ಜರುಗಿದವು.
ಇ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಪ್ರವೀಣ ಗಾಣಿಗೇರ, ಸಂಸ್ಥೆ ಉಪಾಧ್ಯಕ್ಷ ರವೀಂದ್ರ ಬಣಜವಾಡ, ಕಾರ್ಯದರ್ಶಿ ಪ್ರಮೋದ ಲಿಂಬಿಕಾಯಿ, ಖಜಾಂಚಿ ಗಜಕುಮಾರ ಪಾಟೀಲ, ನಿರ್ದೇಶಕರಾದ ಬಾಪುಸಾಬ ಪಾಟೀಲ, ಮಹಾವೀರ ಪಾಟೀಲ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ವಸಂತ ಹುದ್ದಾರ. ಶೀತಲ ಪಾಟೀಲ, ಮೋಹನ ಪಾಟೀಲ, ಸಿದ್ಧಾಂತ ಬಣಜವಾಡ, ಮಂಜುನಾಥ ಕುಚನೂರೆ, ಭರತೇಶ ತೇರದಾಳೆ.ಸಂತೋಷ ತೆರದಾಳೆ,ಶ್ರೀಕಾಂತ ಪಾಟೀಲ, ಕುಮಾರ ಮಾಲಗಾಂವೆ ಪ್ರಾಚಾರ್ಯ,ಮಾಥೋ ಹಾಗೂ ಎಲ್ಲ ಆಡಳಿತ ಮಂಡಳಿಸದಸ್ಯರು,ಶಿಕ್ಷಕರು.ಶಿಕ್ಷಕೀಯರು,ವಿದ್ಯಾರ್ಥಿವಿದ್ಯಾರ್ಥಿನಿಯರು ಇತರರು ಇದ್ದರು ಸೇರಿದಂತೆ ಇತರರು ಇದ್ದರು.
ವರದಿ : ಮುರಗೇಶಗಸ್ತಿ




