ಧಾರವಾಡ: ಪ್ರವಾಸಕ್ಕೆಂದು ಅಂಡಮಾನ್ ಗೆ ತೆರಳಿದ್ದ ಧಾರವಾಡದ ಪ್ರೊಫೆಸರ್ ಓರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಸ್.ಅನ್ನಪೂರ್ಣ ಮೃತ ಪ್ರೊಫೆಸರ್. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂರು ದಿನಗಳ ಹಿಂದೆ ಕುಟುಂಬದ ಜೊತೆ ಪ್ರವಾಸಕ್ಕೆ ಅಂಡಮಾನ್- ನಿಕೋಬಾರ್ ಗೆ ತೆರಳಿದ್ದರು. ಪೋರ್ಟ್ ಬ್ಲೇರ್ ಗೆ ಹೋಗಿದ್ದ ವೇಳೆ ಕಳೆದ ರಾತ್ರಿ ಅನ್ನಪೂರ್ಣ ಅಸ್ವಸ್ಥರಾಗಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಅಷ್ಟರಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು. ಹೃದಯಾಘಾತದಿಂದ ಅನ್ನಪೂರ್ಣ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಕುಟುಂಬದವರು ಧಾರವಾಡಕ್ಕೆ ಮೃತದೇಹ ತರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.




