ವಿಜಯಪುರ :ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಸಭೆ. ಸಭೆಯನ್ನು ಉದ್ದೇಶಿಸಿ ಡಿವೈಸ್ಪಿ ಬಲ್ಲಪ್ಪ ನಂದಗಾವಿ ಅವರು ಮಾತನಾಡುತ್ತ ಆಟೋ ಚಾಲಕರು ಎಲ್ಲರೂ ರಸ್ತೆ ಸುರಕ್ಷತಾ ಜಾಗೃತಿ_2026*ಬಗ್ಗೆ ಕಡ್ಡಾಯವಾಗಿ ಕಾನೂನನ್ನು ತಿಳಿದುಕೊಂಡು ತಾವುಗಳು ಯಾರಿಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮ್ಮ ತಮ್ಮ ಆಟೋಗಳನ್ನು ಚಲಾಯಿಸಿಬೇಕು ಜೊತೆಗೆ ಪಾರ್ಕಿಂಗ್ ಸ್ಥಳದಲ್ಲೇ ಪಾರ್ಕಿಂಗ್ ಮಾಡಬೇಕು ಎಂದು ಹೇಳಿದರು.
ನಂತರ ಸಿಪಿಐ ಗುರುಶಾಂತಗೌಡ ಅವರು ದಾಶ್ಯಾಳ ಮಾತನಾಡಿ ಆಟೋ ಚಾಲಕರು ಎಲ್ಲರೂ ರಸ್ತೆ ಸುರಕ್ಷತಾ ಜಾಗೃತಿ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳುವ ಮೂಲಕ ಸಾರ್ವಜನಿಕ ಜೊತೆಗೆ ಸರಿಯಾಗಿ ಸಹಕರಿಸಬೇಕು ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತಿದ್ದು ಆ ದಿನ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಮ್ಮ ಆಟೋಗಳನ್ನು ಅಡ್ಡಾದಡ್ಡಿ ನಿಲ್ಲಿಸದೆ ತಮಗೆ ನಿಗದಿ ಪಡಿಸಿದ ಪಾರ್ಕಿಂಗ ನಲ್ಲೆ
ನಿಲ್ಲಿಸಿಬೇಕು ಎಂದು ಹೇಳಿದರು.ಈ ಅಧಿಕಾರಿಗಳು ಬಂದ ನಂತರ ಅಪಘಾತ ಪ್ರಕಾರಗಳು ಕಡಿಮೆಯಾಗಿವೆ ಎಂದು ಜನರ ಅಭಿಪ್ರಾಯ.
ಇದೇ ವೇಳೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಗದೀಶ್ ತಕ್ಕೋಡ, ಬಸವರಾಜ ಶೇಬಗೊಂಡ ಸೇರಿದಂತೆ ಅನೇಕ ಆಟೋ ಚಾಲಕರು ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ :ಕೃಷ್ಣ ಎಚ್ ರಾಠೋಡ್




