Ad imageAd image

ಬೇಕರಿ ತಿನಿಸುಗಳನ್ನು ತಯಾರು ಮಾಡುವ ಅಂಗಡಿ ಯಿಂದ ಗ್ರಾಮದ ವಾಯುವ ಮಾಲಿನ್ಯ ಹಾಳು

Bharath Vaibhav
ಬೇಕರಿ ತಿನಿಸುಗಳನ್ನು ತಯಾರು ಮಾಡುವ ಅಂಗಡಿ ಯಿಂದ ಗ್ರಾಮದ ವಾಯುವ ಮಾಲಿನ್ಯ ಹಾಳು
WhatsApp Group Join Now
Telegram Group Join Now

ಉಸಿರು ಉಸಿರಿಗೂ ಹೃದಯಕ್ಕೆ ಹೊಗೆಯದೇ ಕಾಟ

ಜಮಖಂಡಿ : ತಾಲೂಕಿನ ಸಾವಳಗಿ ಗ್ರಾಮದಲ್ಲಿ ಬೇಕರಿ ತಿನಿಸುಗಳನ್ನು ತಯಾರು ಮಾಡುವ ಅಂಗಡಿ ಯಿಂದ ಗ್ರಾಮದ ವಾಯುವ ಮಾಲಿನ್ಯ ಹಾಳು ಮತ್ತು ಜನರ ಅರೋಗ್ಯದ ಮೇಲೆ ಪರಿಣಾಮ ಬಿರುವ ಸಾಧ್ಯತೆ ಹೆಚ್ಚು.

ಇತರ ಕಾಯಿಲೆಗಳು ಹೆಚ್ಚು ವಾಯುಮಾಲಿನ್ಯದಿಂದ ಹೃದಯಾಘಾತದ ಜತೆಗೆ ಮಧುಮೇಹ, ಆಟಿಸಂ, ಬುದ್ಧಿಮಾಂದ್ಯತೆ ಮತ್ತಿತರರ ಕಾಯಿಲೆಗಳ ಪ್ರಮಾಣವೂ ಏರಿಕೆಯಾಗುತ್ತದೆ. ಮಕ್ಕಳು ಅಸ್ತಮಾದಿಂದ ಬಳಲುತ್ತಾರೆ. ವಾಯುಮಾಲಿನ್ಯ ಎಲ್ಲ ವಯೋಮಾನದವರಿಗೂ ಹಾನಿ ಮಾಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಕಾರ್ಖಾನೆಗಳ ಹೊಗೆಯೂ ಹಾನಿ ಮಾಡುತ್ತದೆ. ಈ ಬಗ್ಗೆ ಮಾತನಾಡುವವರೆಷ್ಟು ಮಂದಿ? ಬಹಳ ಕಡಿಮೆ. ವಾಯುಮಾಲಿನ್ಯ ಎಷ್ಟು ಅಪಾಯಕಾರಿ ಎಂದರೆ ಭ್ರೂಣದಲ್ಲಿರುವ ಮಗುವಿಗೂ ಹಾನಿ ಉಂಟು ಮಾಡಬಲ್ಲದು.

ಮಕ್ಕಳು ಅತಿ ವೇಗವಾಗಿ ಉಸಿರಾಡುತ್ತಾರೆ. ಹಾಗಾಗಿ ಹೆಚ್ಚು ಗಾಳಿ ಸೇವಿಸುತ್ತಾರೆ. ಇದರ ಜತೆಗೆ ಮಾಲಿನ್ಯಕಾರಕ ಕಣಗಳು ದೇಹದೊಳಗೆ ಪ್ರವೇಶಿಸುತ್ತವೆ. ಉಸಿರಾಟ ಮತ್ತು ಹೃದಯಕ್ಕೆ ಸಂಬಂಧಿಸಿದ ಅಂಗಗಳು ಶಾಶ್ವತವಾಗಿ ಹಾನಿಗೆ ಒಳಗಾಗುತ್ತವೆ

ಹೌದು ಸಾವಳಗಿ ಗ್ರಾಮದಲ್ಲಿ ಇಂತಹ ಬೇಕರಿ ತಯಾರಿ ಮಾಡುವ ಅಂಗಡಿ ಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಈ ಅಂಗಡಿ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಇವರು ಟಯರ ನಂತ ಪ್ಲಾಸ್ಟಿಕ್ ವಸ್ತು ಗಳನು ಅವರ ಒಲೆಗಳಲ್ಲಿ ಉಪಯೋಗಿಸುವುದರಿಂದ ಗ್ರಾಮದ ಲ್ಲಿ ಕೆಟ್ಟ ವಾಸನೆ ಹರಡುತ್ತಿದು ಸಾರ್ವಜನಿಕರ ಅರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ
ಈ ಅಂಗಡಿ ಮೇಲೆ ಸೊಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ : ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!