ನವದೆಹಲಿ : ಜೂ.30ರೊಳಗೆ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಚುನಾವಣಾ ಆಯೋಗದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೂನ್ 30ರೊಳಗೆ ಜಿಬಿಎ ವ್ಯಾಪ್ತಿಯ 5ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ,
ಈಗಾಗಲೇ ಮೀಸಲಾತಿ ಕರುಡ ಪಟ್ಟಿ ಬಿಡುಗಡೆಯಾಗಿದ್ದು ಫೆಬ್ರವರಿ20ರೊಳಗೆ ಅಂತಿಮ ಮೀಸಲು ಪಟ್ಟಿ ಬಿಡುಗಡೆ ಗೊಳಿಸುಂತೆ ಸೂಚನೆ ನೀಡಿದ್ದು, ಮಾರ್ಚ್ 26ರೊಳಗೆ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ, ಮೇ 26ರಂದು ಚುನಾವಣೆಯ ದಿನಾಂಕ ಘೋಷಣೆ ಮಾಡಬೇಕು,ಅಂದಿನಿಂದ 45ದಿನಗಳ ವ್ಯಾಪ್ತಿಯಲ್ಲಿ ಅಂದರೆ ಜೂನ್ 30ರೊಳಗೆ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಯನ್ನು ಪೂರ್ಣ ಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
ವರದಿ : ಅಯ್ಯಣ್ಣ ಮಾಸ್ಟರ್




