ಬೆಂಗಳೂರು : ಆಭರಣ ಪ್ರಿಯರಿಗೆ ವಾರದ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆಯ ನಡುವೆ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇಂದು ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ಎತ್ತರಕ್ಕೆ ಏರಿವೆ.ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲೇ ಸಾಗುತ್ತಿದೆ.
ಇಂದು ಬೆಳ್ಳಿಯ ದರದಲ್ಲಿ ಪ್ರತಿ 100 ಗ್ರಾಂಗೆ 10-12 ರೂ. ಏರಿಕೆಯಾಗಿದೆ. ತಮಿಳುನಾಡು ಮತ್ತು ಕೇರಳದ ಕೆಲವೆಡೆ ಪ್ರತಿ 100 ಗ್ರಾಂ ಬೆಳ್ಳಿ ಬೆಲೆ ₹28,700 ತಲುಪಿದ್ದು, ಈ ವಾರದಲ್ಲೇ ₹30,000 ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
24K ಚಿನ್ನದ ಒಂದು ಗ್ರಾಂ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಪ್ರತೀ ಗ್ರಾಂ ಬೆಲೆ ಇಂದು 114,215 ರೂ. ಆಗಿದ್ದು, ನಿನ್ನೆ 14,046 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹169 ರೂ. ಹೆಚ್ಚಳವಾಗಿದೆ.




