Ad imageAd image

ರಾಜ್ಯದಲ್ಲಿ ಸರಕಾರ ಬದಲಾವಣೆ ಇಲ್ಲಾ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:ಸಚಿವ ಮುನಿಯಪ್ಪ

Bharath Vaibhav
ರಾಜ್ಯದಲ್ಲಿ ಸರಕಾರ ಬದಲಾವಣೆ ಇಲ್ಲಾ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:ಸಚಿವ ಮುನಿಯಪ್ಪ
WhatsApp Group Join Now
Telegram Group Join Now

ಕಲಬುರಗಿ: ರಾಜ್ಯದಲ್ಲಿ ಸರಕಾರ ಬದಲಾವಣೆ ಮಾಹಿತಿ ಎಲ್ಲವೂ ಸುಳ್ಳು, ಅಂತಹ ಬದಲಾವಣೆ ಇಲ್ಲ, ಎಲ್ಲದ್ದಕ್ಕೂ ನಮಗೆ ಹೈಕಮಾಂಡ್ ಇದೆ. ಅದರ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ನಾವು ಬದ್ಧರಾಗಿದ್ದೇವೆ” ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ದೀರ್ಘಾವಧಿಯ ಸಿಎಂ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವೇಳೆ ಬದಲಾವಣೆ ಕುರಿತು ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಅವರು ಬದ್ಧರಾಗಿರುತ್ತಾರೆ ಎಂದು ಹೇಳಿದರು. ಸಮಾನತೆ ಕಾಣುವುದು, ಅನುದಾನ ನೀಡುವುದರಲ್ಲಿ ಸಿದ್ದರಾಮಯ್ಯ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅದರಲ್ಲಿ ಎಲ್ಲ ವರ್ಗಗಳಿಗೂ ಸಮಾನವಾಗಿ ನೋಡುವುದರಲ್ಲಿ ದೇವರಾಜು ಅರಸು ಅವರು ಅಡಿಗಲ್ಲು ಹಾಕಿದರೆ, ಸಿದ್ದರಾಮಯ್ಯ ಅವರು ಮನೆಯನ್ನೇ ಕಟ್ಟಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯಪಾಲರು ಒಳಮೀಸಲಾತಿ ಬಿಲ್ ವಾಪಸಾತಿ ಬಗ್ಗೆ ಸರಕಾರಕ್ಕೆ ಏನು ಪತ್ರ ಬರೆದಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಅದರ ಬಗ್ಗೆ ಪರಿಶೀಲಿಸಿ ಮುಂದಿನ ಉತ್ತರ ನೀಡುತ್ತೇವೆ ಎಂದ ಅವರು, ಒಳಮೀಸಲಾತಿ ಮಸೂದೆಗೆ ಬೆಳಗಾವಿ ಅಧಿವೇಶನದಲ್ಲಿ ಅವಿರೋಧವಾಗಿ ಪಾಸ್ ಮಾಡಲಾಗಿದೆ. ಮುಂದೆ ಕಾಯ್ದೆಯಾದಾಗ ಬಡ್ತಿ ವಿಷಯ ಕುರಿತಾಗಿ ಪರಾಮರ್ಶಿಸಲಿದ್ದೇವೆ ಎಂದು ಹೇಳಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!