ಸಿಂಧನೂರು: ಖಜಾಸಾಬ್ ತಂದೆ ಸಂಸ್ರಾಸಾಬ್ ಪಿಡಬ್ಲ್ಯೂಡಿ ಕ್ಯಾಂಪ್ ವ್ಯಕ್ತಿಯಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಸತಿ ಕಟ್ಟಡವನ್ನು ಪಡೆದುಕೊಳ್ಳಲಾಗಿತ್ತು.
ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಡಿಗೆ ಹಣ ಒಟ್ಟು ಮೊತ್ತ :20.03.772 ಪಾವತಿಸುವಲ್ಲಿ ವಿಳಂಬ ಮಾಡಿದ ಹಿನ್ನಲೆಯಲ್ಲಿ ಇಲಾಖೆ ಸಾಮಗ್ರಿಳನ್ನು ಜಪ್ತಿ ಮಾಡುವಂತೆ ನಗರದ ಹಿರಿಯ ಶ್ರೇಣಿ ನ್ಯಾಯಾಲಯವು ಆದೇಶ ನೀಡಿದ್ದು.ಆದೇಶದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕ ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಸಂಪೂರ್ಣ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.
ಸಕಾಲದಲ್ಲಿ ಬಾಡಿಗೆ ಹಣ ಪಾವತಿಸದೇ ಇರುವ ಇಲಾಖೆ ಅಧಿಕಾರಿಗಳು ವಿಳಂಬ ಅನುಸರಿಸಿದ ಇನ್ನಲೇ ಡಿಸೇಂಬರ್ 24,12, 2020 ರಂದು ಕೋರ್ಟ್ನಲ್ಲಿ ದಾವೆ (ಒ.ಎಸ್. 2.228/2020) ಆದೇಶದಂತೆ ಕಾಲಾವಧಿಯಲ್ಲಿ ಪಾವತಿ ಕೋರ್ಟ್ ನಿಗದಿತ ಹಣವನ್ನು ಮಾಡಿರದ ಹಿನ್ನೆಲೆಯಲ್ಲಿ ಅರ್ಜಿದಾರರ ದಾವೆಯನ್ನು ಮಾನ್ಯ ಮಾಡಿದ ನ್ಯಾಯಾಲಯವು, ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಸಾಮಗ್ರಿಗಳ ಜಪ್ತಿ ಮಾಡಲಾಯಿತು ಈ ಸಂಧರ್ಭದಲ್ಲಿ ವಕೀಲರಾದ ಎನ್. ರಾಮನಗೌಡ ಅರ್ಜಿದಾರ ಖಾಜಾಸಾಬ್ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




