ಐಗಳಿ : ಅಥಣಿ ತಾಲೂಕಿನ ಐಗಳಿ ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯಯ ಸಿದ್ರಾಮಪ್ಪಾ ತೆಲಸಂಗ ಸ್ವತಂತ್ರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸನ್ ೨೦೨೫-೨೬ ಸಾಲಿನ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ (ಆರ್ಟ್ಸ್ ಅಂಡ್ ಕಾಮರ್ಸ್) ಕಾಲೇಜು ಪ್ರವೇಶಗಳು ಪ್ರಾರಂಭವಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ದ್ರೋಣಾ ಕರಿಯರ್ ಅಕಾಡೆಮಿ ವಿಜಯಪುರ ಇವರ ಸಯೋಗದೊಂದಿಗೆ ಸೇನೆಗೆ ಸೇರಬಯಸುವವರಿಗಾಗಿ ಸೇನಾ ತರಬೇತಿ ಜೊತೆಗೆ ಪಿಯು ಶಿಕ್ಷಣ ಹಾಗೂ ಪಠ್ಯಕ್ರಮದ ಜೊತೆಗೆ ಪರೀಕ್ಷಾ ತರಬೇತಿ ನೀಡಲಾಗುವುದು. ಕಾಲೇಜು ಆರಂಭವಾದ ಎರಡು ವರ್ಷದಲ್ಲಿ ಕಾಲೇಜಿನ ೮ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ನಿರಂತರವಾದ ಅಧ್ಯನಕ್ಕಾಗಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇದ್ದು ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ ವಿದ್ಯಾರ್ಥಿಯ ಗಳು ಪಿಯು ಶಿಕ್ಷಣ ಮುಗಿಯುವದು ಒಳಗಾಗಿ ಜವಾಬ್ದಾರಿತ ಸರ್ಕಾರಿ ಉದ್ಯೋಗ ಸೇರಬೇಕೆಂಬುದೇ ನಮ್ಮ ದಯವಾಗಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ತೆಲಸಂಗ ಅವರು ತಿಳಿಸಿದರು.
ವಿಧ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು
ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಬಾಲಕರ ವಸತಿ ನಿಲಯ ೨೦೨೦ರಲ್ಲಿ ಪ್ರಾರಂಭಿಸಲಾಯಿತು. ಈಗ ೮೦ ವಿದ್ಯಾರ್ಥಿಗಳು ನಿಲಯದಲ್ಲಿ ಇದ್ದು ಹೊಸ ವಸತಿ ನಿಲಯದ ಕಟ್ಟಡ ನಿರ್ಮಾಣವಾಗಿದ್ದು ಒಟ್ಟು ೧೫೦ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಈ ವರ್ಷದ ೨೦೨೫-೨೬ ನೇ ಸಾಲಿನ ಪ್ರವೇಶಗಳು ಈಗಾಗಲೇ ಪ್ರಾರಂಭವಾಗಿದೆ.
ಉತ್ತಮವಾದ ಉಪಹಾರ ಮತ್ತು ಊಟದ ವ್ಯವಸ್ಥೆ
ಮಲಗಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಮಂಚ ಬೇಡ್ ಸೀಟ್ ಸೌಲಭ್ಯ
24×7 ಮಕ್ಕಳೊಂದಿಗೆ ವಾರ್ಡನ್ ಸೇರಿ ಇಬ್ಬರು ಶಿಕ್ಷಕರ ವ್ಯವಸ್ಥೆ
ಶಾಲಾ ಅವಧಿಯ ನಂತರ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಇಂಗ್ಲಿಷ್ ಗಣಿತ್ ವಿಜ್ಞಾನ ವಿಷಯಗಳ ಪಾಠ ಬೋಧನೆ.
ಪ್ರತಿ ತಿಂಗಳು ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ವರದಿ ನೀಡಲು ಪಾಲಕರ ಸಭೆ ನಡೆಸಲಾಗುವುದು. ಮೂರನೇ ತರಗತಿಯಿಂದ ೧೦ನೇ ತರಗತಿಯವರೆಗೆ ಮಕ್ಕಳು ಹಾಸ್ಟೆಲ್ ನಲ್ಲಿ ಕಲಿತರೆ ಅವರು ಅವರ ಉನ್ನತ ಶಿಕ್ಷಣ ಪಡೆದು ಸರ್ಕಾರಿ ಸೇವೆಗೆ ಸೇರುವುದು ಗ್ಯಾರಂಟಿಯಾಗಿದೆ *ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕ ಗಮನ ಹರಿಸಲಾಗುವುದು ಪ್ರತಿ ಒಬ್ಬ ವಿದ್ಯಾರ್ಥಿಗೆ ಒಳ್ಳೆಯ ಸಂಸ್ಕಾರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಆದರ್ಶ ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಇದೇ ಎಪ್ರಿಲ್ ೧ರಿಂದ ಮೇ೩೦ರ ವರಿಗೆ ಎರಡು ತಿಂಗಳು ಬೇಸಿಗೆ ಶಿಬಿರವನ್ನು ಪ್ರಾರಂಬಿಸಲಾಗುವುದು ವಿಶೇಷವಾಗಿ ಇಂಗ್ಲಿಷ್, ಗಣಿತ, ವಿಜ್ಞಾನ, ಗ್ರಾಮರ್ ವಿಷಯಗಳನ್ನು ಕಲಿಸುತ್ತಾರೆ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೂಡಲೇ ಸಂಪರ್ಕಿಸಿ 9008905242-8105588445
ವರದಿ : ಆಕಾಶ ಮಾದರ




