ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಬೆಳ್ಳಿಯು ಹೊಸ ದಾಖಲೆಯನ್ನು ನಿರ್ಮಿಸಿದೆ.
ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸಿದರೆ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಇಳಿಕೆಯನ್ನು ನಿರೀಕ್ಷಿಸಬಹುದು.
ಆದಾಗ್ಯೂ, ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡುವವರು ಮಾರುಕಟ್ಟೆಯ ಚಲನೆಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.ಮಂಗಳವಾರ ಬೆಳ್ಳಿ ಬೆಲೆ 5 ರೂ ಏರಿಕೆ ಆಗಿದೆ
ಇಂದಿನ ಪ್ರಮುಖ ದರಗಳ ವಿವರ (ಬೆಂಗಳೂರು):
ಜನವರಿ 13, 2026ರ ವರದಿ ಪ್ರಕಾರ ಪ್ರಸ್ತುತ ಮಾರುಕಟ್ಟೆ ದರಗಳು ಹೀಗಿವೆ:
22 ಕ್ಯಾರಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ ₹1,30,650 (ಗ್ರಾಮ್‌ಗೆ ₹35 ಏರಿಕೆ).
24 ಕ್ಯಾರಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ ₹1,42,530 (ಗ್ರಾಮ್‌ಗೆ ₹38 ಏರಿಕೆ).
18 ಕ್ಯಾರಟ್ ಚಿನ್ನ: ಪ್ರತಿ ಗ್ರಾಮ್‌ಗೆ ಅಂದಾಜು ₹10,690 ರಷ್ಟಿದೆ.




