ಬೆಳಗಾವಿ: ಸಹೋದರರ ಗಲಾಟೆಯ ವೇಳೆ ತಂದೆಗೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಬಸಯ್ಯ ಏಣಗಿಮಠ(65) ಅವರಿಗೆ ಐದು ಕಡೆ ವಿಜಯ್ ಇರಿದಿದ್ದಾನೆ.
ತಂದೆಯ ಜೊತೆಗೆ ಕಿರಿಯ ಮಗ ವಿಜಯ್ ಜಗಳವಾಡುತ್ತಿದ್ದ. ಈ ವೇಳೆ ಮಧ್ಯ ಪ್ರವೇಶಿಸಿದ ಸಹೋದರ ಹಾಗೂ ಪತ್ನಿ ಗಲಾಟೆ ಬಿಡಿಸಲು ಮುಂದಾಗಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಚಾಕು ಇರಿದು ವಿಜಯ್ ಪರಾರಿಯಾಗಿದ್ದಾನೆ. ಗಾಯಾಳು ಬಸಯ್ಯನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




