ಕಲಬುರಗಿ:ಕಮಲಾಪುರ ತಾಲೂಕಿನಲ್ಲಿ ವಿಕೆ.ಸಲಗರ ಗ್ರಾಮದಲ್ಲಿ ತಪೋನಿಧಿ ಸಾಂಬ ಶಿವಯೋಗೀಶ್ವರರ 85ನೇ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು ಸಾಯಂಕಾಲ 6:00 ಗಂಟೆ ಮಹಾರಥೋತ್ಸವ ಜರಗಲಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ ಸಾಂಬ ಸ್ವಾಮಿ ಶಿವಯೋಗಿಗಳ ಪಲ್ಲಕ್ಕಿಯನ್ನು ಮೆರವಣಿಗೆ ಮಾಡುವುದರ ಮೂಲಕ ಗ್ರಾಮಸ್ಥರು ಭಾಗವಹಿಸುತ್ತಾರೆ ನಂದಿ ಕೋಲ್ ಮುತ್ತೈದಿ ಹೆಣ್ಣು ಮಕ್ಕಳಿಂದ ಕುಂಬಾ ಕಳಸ ಹೊತ್ತು ಕೊಂಡು ಬರುತ್ತಾರೆ ಅಷ್ಟೇ ಅಲ್ಲ ಡೊಳ್ಳು. ವಾದ್ಯ.ನಗಾರಿ ಮೆರವಣಿಗೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಾರೆ ನಂತರ ದ್ವಿತೀಯ ಸಾಂಬ ಶಿವಯೋಗಿಸ್ವರರು ರಥಕ್ಕೆ ಚಾಲನೆ ನೀಡುತ್ತಾರೆ ಐದು ದಿನಗಳ ಕಾಲ ಈ ಜಾತ್ರೆ ನಡೆಯುತ್ತೆ ಎಂದು ಗ್ರಾಮದ ಮುಖಂಡರಾದ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಗಳಾದ ಮಹಾಲಿಂಗ ಜಿಮ್ ಶೆಟ್ಟಿ.ಹಾಗೂ ಸಂತೋಷ ಕುಮಾರ ಜಮಾದಾರ್ .ಸುನಿಲ ವಗ್ಗೆ.ಸುನಿಲ್ ಸಲಗರ ಜಮೀರ್ದ್ದೀನ್. ಗುರು ಮೂಲಗೆ. ನೀಲಕಂಠ ಅಳ್ಳಿ.ಬಸವರಾಜ್ ದಂಡೆ ಮಲ್ಲಿಕಾರ್ಜುನ್ ಪೂಜಾರಿ ಮುಂತಾದವರು ಉಪಸ್ಥಿತಿ ಇದ್ದರು.
ವರದಿ :ಸುನಿಲ್ ಸಲಗರ




